Breaking News

ಪ್ರಜ್ವಲ್ ರೇವಣ್ಣನ ಮುಟ್ಟೋದು ಅಷ್ಟು ಸುಲಭವಲ್ಲ! ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದಾ?

Spread the love

ಬೆಂಗಳೂರು: ಪೆನ್​ ಡ್ರೈವ್​ಗೆ ಸಂಬಂಧಿಸಿದಂತೆ ಸಾಲು ಸಾಲು ಆರೋಪಗಳನ್ನು ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ ರೇವಣ್ಣ ಇಂದು ಮಧ್ಯರಾತ್ರಿ ಬೆಂಗಳೂರಿಗೆ ಬರೋದು ಪಕ್ಕಾ ಆಗಿದೆ. ಜರ್ಮನಿಯಿಂದ ಪ್ರಜ್ವಲ್​​ನ ಹೊತ್ತ ವಿಮಾನ ಬೆಂಗಳೂರಿನತ್ತ ಧಾವಿಸುತ್ತಿದೆ. ಪ್ರಜ್ವಲ್ ಬಂದ ಕೂಡಲೇ ಬಂಧನಕ್ಕೆ ಎಸ್ ಐಟಿ ಸಜ್ಜಾಗಿದೆ.

ಈಗಾಗಲೇ ಕೋರ್ಟ್ ನಿಂದ ಅರೆಸ್ಟ್ ವಾರೆಂಟ್ ಪಡೆಯಲಾಗಿದೆ. ಏರ್​ಪೋರ್ಟ್​ನಲ್ಲೇ ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಸ್ಥಳೀಯ ಪೊಲೀಸರ ಸಹಾಕಾರದೊಂದಿಗೆ ವಶಕ್ಕೆ ಪಡೆಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೆಂಪೇಗೌಡ ಏರ್ ಪೋರ್ಟ್ ಅಧಿಕಾರಿಗಳ ಜೊತೆಯೂ ನಿರಂತರ ಸಂಪರ್ಕದಲ್ಲಿದ್ದಾರೆ. ಹಾಲಿ ಸಂಸದರಾಗಿರುವ ಪ್ರಜ್ವಲ್​ನ ಬಂಧನ ಮಾಡೋದು ಅಷ್ಟು ಸುಲಭದ ಮಾತಲ್ಲ, ಅದಕ್ಕಾಗಿ ಅಧಿಕಾರಿಗಳು ಎಷ್ಟೆಲ್ಲಾ ಪ್ರಕ್ರಿಯೆಗಳ ಮೂಲಕ ಹಾದು ಹೋಗಬೇಕು ಗೊತ್ತೇ? ಆ ಬಗ್ಗೆ ಮಾಹಿತಿ ಇಲ್ಲಿದೆ.ಪ್ರಜ್ವಲ್ ರೇವಣ್ಣನ ಮುಟ್ಟೋದು ಅಷ್ಟು ಸುಲಭವಲ್ಲ! ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಆಗಬಹುದಾ?

ಪ್ರಜ್ವಲ್ ರೇವಣ್ಣ ಬಂದ ಕೂಡಲೇ ನಡೆಯುವ ಪ್ರಕ್ರಿಯೆಗಳು

  1. ಲುಕ್‌ಔಟ್ ನೊಟೀಸ್ ಸಂಬಂಧ ಪರಿಶೀಲನೆ ಆಗಬೇಕು.
  2. ಪ್ರಜ್ವಲ್ ರೇವಣ್ಣ ಮೇಲೆ ಬ್ಲೂ ಕಾರ್ನರ್ ನೊಟೀಸ್ ಕೂಡ ಇದೆ.
  3. ಪ್ರಜ್ವಲ್ ರೇವಣ್ಣ ಬಳಿ ಇರೋದು ರಾಜತಾಂತ್ರಿಕ‌ ಪಾಸ್ ಪೋರ್ಟ್.
  4. ರಾಜತಾಂತ್ರಿಕ‌ ಪಾಸ್ ಪೋರ್ಟ್ ಹೊಂದಿದ ವ್ಯಕ್ತಿ ವಿಮಾನ ನಿಲ್ದಾಣದಲ್ಲೇ ಬಂಧನವಾದ್ರೆ ಇಮಿಗ್ರೇಶನ್ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಿಳಿಸಬೇಕು.
  5. ಪ್ರಜ್ವಲ್ ರೇವಣ್ಣ ಜನ ಪ್ರತಿನಿಧಿಯಾಗಿರುವುದರಿಂದ ಇಮಿಗ್ರೇಶನ್ ಈ ಮಾಹಿತಿಯನ್ನ ಲೋಕಸಭಾ ಸ್ಪೀಕರ್ ಗೆ ನೀಡಬೇಕು.
  6. ಹೀಗಾಗಿ ಇವರ ರಾಜತಾಂತ್ರಿಕ ಪಾಸ್ ಪೋರ್ಟ್ ಮೇಲೆ ದಾಖಲಾಗಿರುವ ಲುಕ್ ಔಟ್ ನೋಟಿಸ್, ಬ್ಲೂ ಕಾರ್ನರ್ ನೋಟಿಸ್ ಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲಾಗಿದೆ.
  7. ಈ ಎಲ್ಲ ಮಾಹಿತಿಗಳನ್ನ ಸಂಗ್ರಹ ಮಾಡಿ ಅದನ್ನ ಡ್ರಾಫ್ಟ್ ಮಾಡಿ ಇವರಿಂದ ಸಹಿ ಪಡೆಯಲಿರುವ ಇಮಿಗ್ರೇಶನ್.
  8. ಈ ಎಲ್ಲ ಪ್ರಕ್ರಿಯೆ ಬಳಿಕವೇ ಎಸ್ ಐ ಟಿಗೆ ಕ್ಲಿಯರೆನ್ಸ್ ನೀಡಲಿರುವ ಅಧಿಕಾರಿಗಳು.

Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ