Breaking News

ಮಹಿಳೆಯರಿಂದ ಭರ್ಜರಿ ‘ಶಕ್ತಿ’ ಪ್ರದರ್ಶನ: GST ಸಂಗ್ರಹ ಹೆಚ್ಚಳ

Spread the love

ಬೆಂಗಳೂರು: ಶಕ್ತಿ ಯೋಜನೆಯಿಂದ ಜಿಎಸ್​ಟಿ ಸಂಗ್ರಹ ಮತ್ತು ಮಹಿಳೆಯರ ಪಾಲುದಾರಿಕೆ ಶೇ 25.1ನಿಂದ 30.2ಗೆ ಹೆಚ್ಚಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಕ್ತಿ ಉಚಿತ ಯೋಜನೆ ಎಂದು ಮೂಗು ಮುರಿಯುವವರ ಗಮನಕ್ಕೆ!

ಶಕ್ತಿ ಯೋಜನೆಯಿಂದ ಜಿಎಸ್​​ಟಿ ಸಂಗ್ರಹ ಹೆಚ್ಚಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿ ಶೇ 25.1ನಿಂದ 30.2ರಷ್ಟು ಮಹಿಳೆಯ ಪಾಲುದಾರಿಕೆ ಹೊಂದಿದೆ.

https://x.com/RLR_BTM/status/1795828541709492559?ref_src=twsrc%5Etfw%7Ctwcamp%5Etweetembed%7Ctwterm%5E1795828541709492559%7Ctwgr%5Efd4d0d2428a12bdbfbe853e306ea05eb814d8f7b%7Ctwcon%5Es1_&ref_url=https%3A%2F%2Ftv9kannada.com%2Fkarnataka%2Fshakti-yojana-adds-to-karnatakas-gst-as-more-women-join-work-force-ramalingareddy-ggs-840902.html

ಇದು ಬಿಟ್ಟಿ ಭಾಗ್ಯವಲ್ಲ ಸಮಾಜದಲ್ಲಿ ಸರ್ಕಾರ ಹೂಡಿರುವ ಬಂಡವಾಳ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಆ ಮೂಲಕ ಶಕ್ತಿ ಉಚಿತ ಯೋಜನೆ ಎಂದು ಮೂಗು ಮುರಿಯುವ ಬಿಜೆಪಿಗೆ ಟಾಂಗ್​ ನೀಡಿದ್ದಾರೆ.ಕರ್ನಾಟಕ ಕಾಂಗ್ರೆಸ್ ನಮ್ಮ ನಾಗರಿಕರ ಕಲ್ಯಾಣವನ್ನು ಹೆಚ್ಚಿಸಲು ಬದ್ಧವಾಗಿದೆ. ಅದರಲ್ಲೂ ವಿಶೇಷವಾಗಿ ತಮ್ಮ ಕುಟುಂಬಗಳನ್ನು ಕಾಳಜಿ ವಹಿಸುವ ಆರ್ಥಿಕ ಸಬಲೀಕರಣಕ್ಕೆ ಅರ್ಹರಾಗಿರುವ ಕಠಿಣ ಪರಿಶ್ರಮಿ ಮಹಿಳೆಯರಿಗೆ. ಶಕ್ತಿ ಯೋಜನೆ; ಸಬಲೀಕರಣಗೊಂಡ ಮಹಿಳೆಯರ ಪಯಣ ಎಂದು ಬರೆದುಕೊಂಡಿದ್ದಾರೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ