Breaking News

ನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ ಎಂದು ವದಂತಿ

Spread the love

ಬೆಂಗಳೂರು: ಸ್ಯಾಂಡಲ್ ವುಡ್ ನಟರ ಸಾವಿನ ವದಂತಿ ಹಬ್ಬುವುದು ಇದೇ ಮೊದಲಲ್ಲ. ಇದೀಗ ನಟ ಪ್ರಜ್ವಲ್ ದೇವರಾಜ್ ಅವರ ಬಗ್ಗೆ ಇಂತಹದ್ದೊಂದು ವದಂತಿ ಹರಿಯಬಿಡಲಾಗಿದ್ದು, ಕುಟುಂಬಸ್ಥರು ಬೇಸರಗೊಂಡಿದ್ದಾರೆ. ಸ್ಯಾಂಡಲ್ ವುಡ್ ನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ ಎಂದು ಯಾರೋ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಿದ್ದರು.
ಇದರಿಂದ ಅಭಿಮಾನಿಗಳು ಆತಂಕಕ್ಕೀಡಾದರು. ಕೆಲವೇ ಕ್ಷಣಗಳಲ್ಲಿ ಈ ಸುದ್ದಿ ವೈರಲ್ ಆಗುತ್ತಿದ್ದಂತೇ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ನಟ ಪ್ರಜ್ವಲ್ ದೇವರಾಜ್ ಇನ್ನಿಲ್ಲ ಎಂದು ವದಂತಿ

ಆರೋಗ್ಯವಾಗಿರುವ ನಟನ ಬಗ್ಗೆ ಇಂತಹದ್ದೊಂದು ಸುದ್ದಿ, ಫೋಟೋ ಹಂಚುತ್ತಿರುವ ಬಗ್ಗೆ ಕುಟುಂಬಸ್ಥರು ಬೇಸರಗೊಂಡಿದ್ದು, ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರಜ್ವಲ್ ಆಪ್ತರು ವದಂತಿಗಳಿಗೆ ಕಿವಿಗೊಡಬೇಡಿ. ಪ್ರಜ್ವಲ್ ಆರೋಗ್ಯವಾಗಿದ್ದಾರೆ ಎಂದಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ಈ ರೀತಿ ಅನೇಕ ಬಾರಿ ಹಿರಿಯ ನಟರ ಬಗ್ಗೆ ಸಾವಿನ ವದಂತಿ ಹರಡಿರುವ ಘಟನೆಗಳು ನಡೆದಿದ್ದವು. ಆದರೆ ಆರೋಗ್ಯವಾಗಿರುವ ಚಿಕ್ಕವಯಸ್ಸಿನ ನಟನ ಬಗ್ಗೆ ಇಂತಹದ್ದೊಂದು ವದಂತಿ ಹರಡಿರುವುದು ಅವರ ಕುಟುಂಬದವರಿಗೆ ನೋವುಂಟುಮಾಡಿದೆ.

ಪ್ರಜ್ವಲ್ ದೇವರಾಜ್ ಹಿರಿಯ ನಟ ದೇವರಾಜ್ ಪುತ್ರ. ಈ ವರ್ಷ ಹಲವು ಸಿನಿಮಾಗಳಲ್ಲಿ ಪ್ರಜ್ವಲ್ ನಟಿಸುತ್ತಿದ್ದಾರೆ. ಗಣ, ಮಾಫಿಯಾ, ಕರಾವಳಿ ಮುಂತಾದ ನಾಲ್ಕೈದು ಸಿನಿಮಾಗಳು ಅವರ ಕೈಯಲ್ಲಿದೆ.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ