Breaking News

ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಅರಿವು ಅವಶ್ಯ: ಕೂಡಲಶ್ರೀ

Spread the love

ಶಿಗ್ಗಾವಿ: ‘ಗ್ರಾಮೀಣ ಜೀವನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಅವಶ್ಯವಾಗಿದೆ. ಅದರಿಂದ ಭವಿಷ್ಯದ ಭದ್ರತೆ ಕಾಣಲು ಸಾಧ್ಯವಿದೆ. ಹೀಗಾಗಿ ಶಾಲಾ, ಕಾಲೇಜುಗಳ ಹಂತದಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ’ ಎಂದು ಕೂಡಲದ ಗುರುಮಹೇಶ್ವರ ಸ್ವಾಮೀಜಿ ಹೇಳಿದರು.

 

ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಅರಿವು ಅವಶ್ಯ: ಕೂಡಲಶ್ರೀ

ತಾಲ್ಲೂಕಿನ ಬಂಕಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ದತ್ತು ಗ್ರಾಮ ಚಂದಾಪುರ ಗ್ರಾಮದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಬರಿ ಓದು, ಬರಹ ಮತ್ತು ಹೆಚ್ಚಿನ ಅಂಕ ಗಳಿಸುವುದು ಕಲಿಸುವುದರ ಜತೆಗೆ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳುವ ಜ್ಞಾನವನ್ನು ನೀಡುವುದು ಮುಖ್ಯವಾಗಿದೆ. ಶಾಲೆ, ಕಾಲೇಜಿನ ತರಗತಿ ಬಿಟ್ಟು ಪಠ್ಯೇತರ ಚಟುವಟಿಕೆಗಳ ಮೂಲಕ ಸಾಮಾನ್ಯ ಜ್ಞಾನ ನೀಡುವುದು ಅವಶ್ಯವಾಗಿದೆ. ಸರ್ಕಾರ ಹಮ್ಮಿಕೊಂಡ ಈ ಯೋಜನೆ ಉತ್ತಮವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶಿಬಿರ ಏರ್ಪಡಿಸುವ ಮೂಲಕ ಅಲ್ಲಿನ ಸ್ವಚ್ಛತೆ, ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ನಿತ್ಯದ ಬದುಕಿನ ಬಗ್ಗೆ ಜ್ಞಾನ ನೀಡುವ ಮಾರ್ಗದರ್ಶಿ ಕಾಯಕ ಉತ್ತಮವಾಗಿದೆ’ ಎಂದರು.

ಪ್ರಭಂಜನ್ ಇಂಡಸ್ಟ್ರೀಸ್ ಮುಖ್ಯಸ್ಥ ರಾಘವೇಂದ್ರ ಮೇಲಗಿರಿ ಮಾತನಾಡಿ, ‘ವಿದ್ಯಾರ್ಥಿ ಜೀವನದಲ್ಲಿ ದೊಡ್ಡ ಕನಸುಗಳನ್ನು ಹೊಂದಬೇಕು. ಅವುಗಳ ಈಡೇರಿಕೆಗಾಗಿ ನಿತ್ಯ ಶ್ರಮವಹಿಸಬೇಕು. ನಿಷ್ಠೆ, ಪ್ರಾಮಾಣಿಕ ಯತ್ನ ಮತ್ತು ಛಲವಿದ್ದರೆ ಕನಸು ಈಡೇರಲು ಸಾಧ್ಯವಿದೆ. ಉದ್ಯೋಗಿಯಾಗುವುದರ ಜತೆಗೆ ಉದ್ಯಮಿಯಾಗುವ ಚಿಂತನೆ ಮಾಡಬೇಕು. ತಂದೆತಾಯಿ ಗೌರವಿಸುವ ಮೂಲಕ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ