ಬೆಂಗಳೂರು, ಮೇ 29: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯು ಕರ್ನಾಟಕದ ಜಿಎಸ್‌ಟಿ ಸಂಗ್ರಹಕ್ಕೆ ಕೊಡುಗೆ ನೀಡುತ್ತಿದೆ ಮತ್ತು ಕಾರ್ಮಿಕ ಬಲದಲ್ಲಿ ಮಹಿಳಾ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತಿದೆ ಎಂದು ರಾಜ್ಯ ಹಣಕಾಸು ನೀತಿ ಸಂಸ್ಥೆ (ಎಫ್‌ಪಿಐ) ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಕಳೆದ ವರ್ಷ, ಶಕ್ತಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ ಈ ವರ್ಷದ ಮಾರ್ಚ್‌ವರೆಗೆ, ಕರ್ನಾಟಕದ ಜಿಎಸ್‌ಟಿ ಸಂಗ್ರಹವು ಸಂಭಾವ್ಯವಾಗಿ 309.64 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದೆ. ಏಕೆಂದರೆ ಮಹಿಳೆಯರು ಉಳಿಸುವ ಹಣವನ್ನು ಬಳಕೆಯ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ, ಇದು ಸರ್ಕಾರಕ್ಕೆ ಆದಾಯವಾಗಿ ಬದಲಾಗುತದೆ ಎಂದು ಅಧ್ಯಯನವು ತಿಳಿಸಿದೆ.