Breaking News

ಸಾಣಿಕೊಪ್ಪದಲ್ಲಿ ಹೆಜ್ಜೆ-ಹೆಜ್ಜೆಗೂ ಸಮಸ್ಯೆ

Spread the love

ಬೈಲಹೊಂಗಲ: ರಸ್ತೆಬದಿ ಬಿದ್ದಿರುವ ಕಸದ ರಾಶಿ. ತ್ಯಾಜ್ಯ ಪದಾರ್ಥಗಳಿಂದ ತುಂಬಿ ತುಳುಕುವ ಚರಂಡಿಗಳು. ರಸ್ತೆಯಲ್ಲೇ ಹರಿಯುವ ಕೊಳಚೆ ನೀರು.
ಹಿರೇಬಾಗೇವಾಡಿ-ಸವದತ್ತಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ತಾಲ್ಲೂಕಿನ ಸಾಣಿಕೊಪ್ಪದಲ್ಲಿ ಒಂದು ಸುತ್ತು ಹಾಕಿಬಂದರೆ, ಇಂಥ ದೃಶ್ಯ ಕಣ್ಣಿಗೆ ಬೀಳುತ್ತವೆ.

ಚಿವಟಗುಂಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಟ್ಟಿರುವ ಈ ಗ್ರಾಮದಲ್ಲಿ 400 ಮನೆಗಳಿವೆ. 2,200 ಜನಸಂಖ್ಯೆ ಇದೆ. ರಾಜ್ಯ ಹೆದ್ದಾರಿ ಹಾಯ್ದು ಹೋಗಿದ್ದರೂ, ಈ ಊರು ಅಭಿವೃದ್ಧಿಗೆ ತನ್ನನ್ನು ತೆರೆದುಕೊಂಡಿಲ್ಲ. ಕನಿಷ್ಠ ಮೂಲಸೌಲಭ್ಯಕ್ಕಾಗಿ ಗ್ರಾಮಸ್ಥರ ಪರದಾಟ ತಪ್ಪಿಲ್ಲ.

ಗ್ರಾಮಾಯಣ: ಸಾಣಿಕೊಪ್ಪದಲ್ಲಿ ಹೆಜ್ಜೆ-ಹೆಜ್ಜೆಗೂ ಸಮಸ್ಯೆ

ಶುಚಿತ್ವಕ್ಕೆ ಸಿಗದ ಆದ್ಯತೆ: ‘ನಮ್ಮೂರಿನಲ್ಲಿ ಕೃಷಿ ಕುಟುಂಬ ಹೆಚ್ಚಿವೆ. ಮುಖ್ಯರಸ್ತೆ ಬದಿ ಜಾನುವಾರುಗಳಿಗೆ ಬಣವೆಗಳ ರಾಶಿ ಮಾಡಲಾಗುತ್ತಿದೆ. ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ ಸಾಂಕ್ರಾಮಿಕ ಕಾಯಿಲೆಗಳಿಗೆ ಆಹ್ವಾನ ನೀಡುತ್ತಿದೆ. ಆದರೆ, ಗ್ರಾಮ ಪಂಚಾಯ್ತಿಯವರು ಶುಚಿತ್ವಕ್ಕೆ ಆದ್ಯತೆ ನೀಡುತ್ತಿಲ್ಲ’ ಎಂದು ಗ್ರಾಮಸ್ಥರಾದ ಸಂದೀಪ ಮಾಯಕ್ಕನವರ, ಉದಯ ಚಿಕ್ಕಮಠ ಬೇಸರಿಸಿದರು.
‘ಮಳೆಯಾದರೆ ಗ್ರಾಮದಲ್ಲಿನ ರಸ್ತೆ ಕೆಸರುಮಯವಾಗಿ ಮಾರ್ಪಡುತ್ತಿವೆ. ಮಳೆ ನೀರು ಮನೆಗಳಿಗೆ ನುಗ್ಗುತ್ತಿದೆ. ರಸ್ತೆಯಲ್ಲಿ ಸಂಗ್ರಹವಾಗುತ್ತಿರುವ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡಬೇಕೆಂದು ಗ್ರಾ.ಪಂಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂಬುದು ಅವರ ಆರೋಪ.


Spread the love

About Laxminews 24x7

Check Also

ಅಕ್ರಮ ಗೋವು ಸಾಗಾಟ: 10 ಕಿಮೀ ಬೆನ್ನಟ್ಟಿ ಪರಾರಿಯಾಗುತ್ತಿದ್ದ ಆರೋಪಿ ಕಾಲಿಗೆ ​ಗುಂಡೇಟು ಕೊಟ್ಟ ಪೊಲೀಸರು

Spread the loveಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಬೆಳ್ಳಿಚಡವಿನಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಸರ್​ ಲಾರಿಯನ್ನು ಬೆನ್ನಟ್ಟಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ