Breaking News

ರೈತರ ಗಮನಕ್ಕೆ.. ಇನ್ಮುಂದೆ ನಿಮ್ಮ RTC ಗೆ ಆಧಾರ್ ಲಿಂಕ್ ಕಡ್ಡಾಯ – ಸರ್ಕಾರದ ಆದೇಶ!

Spread the love

ರ್‌ಟಿಸಿಗೆ ಆಧಾರ್ ಜೋಡಣೆ ಮಾಡಲು ಅನುಕೂಲವಾಗುವಂತೆ ಸರ್ಕಾರ ಹೊಸದಾದ ತಂತ್ರಾಂಶವನ್ನು ಸಿದ್ಧಗೊಳಿಸಿದೆ. ಈ ಕುರಿತು ಗ್ರಾಮ ಆಡಳಿತ ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ. ಈ ಕಡ್ಡಾಯವಾದ ಕಾರ್ಯವನ್ನು ಮಾಡಲು ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ.

ರೈತರ ಗಮನಕ್ಕೆ.. ಇನ್ಮುಂದೆ ನಿಮ್ಮ RTC ಗೆ ಆಧಾರ್ ಲಿಂಕ್ ಕಡ್ಡಾಯ - ಸರ್ಕಾರದ ಆದೇಶ!

ಅಗತ್ಯ ದಾಖಲೆಗಳು :
ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು, ಬ್ಯಾಂಕ್ ಸೌಲಭ್ಯಗಳನ್ನು ಪಡೆಯಲು ಮತ್ತು ಕೃಷಿ ಇಲಾಖೆ ಸೌಲಭ್ಯಗಳನ್ನು ಪಡೆಯಲು ಮತ್ತು ಬೆಳೆ ಪರಿಹಾರ ಪಡೆಯಲು ಜಮೀನಿನ ಉತಾರಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿರುತ್ತದೆ.

ಜಮೀನಿನ ಉತಾರ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಗ್ರಾಮದ ಗ್ರಾಮ ಒನ್ ಕೇಂದ್ರ, ಆನ್‌ಲೈನ್ ಕೇಂದ್ರ ಮತ್ತು ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿಗೆ ಭೇಟಿ ನೀಡಬೇಕೆಂದು ತಿಳಿಸಲಾಗಿದೆ.

7 ವರ್ಷದ ಹಿಂದೆಯೇ ಕರ್ನಾಟಕ ಸರ್ಕಾರ ಆರ್‌ಟಿಸಿಗೆ ಆಧಾರ್‌ ಕಾರ್ಡ್ ಜೋಡಣೆ ಮಾಡುವ ಕಾರ್ಯವನ್ನು ಆರಂಭಿಸಿತ್ತು. ಕೆಲವು ರೈತರು ಆಧಾರ ಲಿಂಕ್ ಮಾಡಿದ್ದರು. ಆದರೆ ಈಗ ಸರ್ಕಾರದ ಸೌಲಭ್ಯಗಳು ಬೇಕು ಎಂದರೆ ಕಡ್ಡಾಯವಾಗಿ ಜೋಡಣೆ ಮಾಡಬೇಕು ಎಂದು ಸರ್ಕಾರ ಹೇಳಿದ್ದು, ರೈತರು ಸರ್ಕಾರಿ ಸೌಲಭ್ಯ ಪಡೆದುಕೊಳ್ಳುವಲ್ಲಿ ವಿಫಲವಾಗುತ್ತಾರೆ.ಹೆಚ್ಚಿನ ಸಂಖ್ಯೆಯ ಹಕ್ಕುಗಳು, ಗೇಣಿದಾರರು ಮತ್ತು ಬೆಳೆಗಳ ಮಾಹಿತಿ ಸತ್ತ ರೈತರ ಹೆಸರಿನಲ್ಲಿ ಇನ್ನೂ ಇವೆ.

ಸರ್ಕಾರದ ಯೋಜನೆಗಳ ಸಹಾಯವನ್ನು ಪಡೆಯಲು, ಶಾಶ್ವತ ಪರಿಹಾರದ ಅಂಗವಾಗಿ ಆರ್‌ಟಿಸಿ, ಆಧಾರ್ ಲಿಂಕ್ ಮಾಡಲು ಸೂಚನೆ ನೀಡಲಾಗಿದೆ” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ ಮತ್ತು ಗ್ರಾಮ ಆಡಳಿತ ಅಧಿಕಾರಿಗಳು ಭೂ ಮಾಲೀಕರು, ರೈತರ ಮನಗೆ ಆಗಮಿಸಿದ ಸಂದರ್ಭದಲ್ಲಿ ಎಲ್ಲಾ ಆರ್‌ಟಿಸಿಗಳನ್ನು ಆಧಾರ್ ಕಾರ್ಡ್‌ ಜೊತೆ ಲಿಂಕ್ ಮಾಡುವ ಪ್ರಕ್ರಿಯೆಗೆ ರೈತರು ಸಹಕಾರ ನೀಡಬೇಕು” ಎಂದು ಸಚಿವರು ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ