Breaking News
Home / Uncategorized / ಕರ್ನಾಟಕದಲ್ಲಿ ಕುಬೇರರ ತವರು ಯಾವುದು ಗೊತ್ತಾ?

ಕರ್ನಾಟಕದಲ್ಲಿ ಕುಬೇರರ ತವರು ಯಾವುದು ಗೊತ್ತಾ?

Spread the love

 ಸಾಮಾನ್ಯವಾಗಿ ನಾವು ಭಾರತದ ಅತ್ಯಂತ ಶ್ರೀಮಂತ ನಗರಗಳ ಬಗ್ಗೆ ಕೇಳಿರುತ್ತೇವೆ. ಹಾಗೆಯೇ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಪ್ರವಾಸೋದ್ಯಮ, ಹಣಕಾಸು ವಿಚಾರಕ್ಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ 2024ನೇ ಸಾಲಿನಲ್ಲಿ ಯಾವೆಲ್ಲಾ ಜಿಲ್ಲೆಗಳು ಶ್ರೀಮಂತ ಪಟ್ಟವನ್ನು ಪಡೆದುಕೊಂಡಿವೆ, ವಿಶೇಷತೆ ಹಾಗೂ ಅಲ್ಲಿನ ತಲಾ ಆದಾಯ ಎಷ್ಟು ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ನೀಡಲಾಗಿದೆ ಇಲ್ಲಿ ಗಮನಿಸಿ.

Karnataka's Richest Districts: ಕರ್ನಾಟಕದಲ್ಲಿ ಕುಬೇರರ ತವರು ಯಾವುದು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ

ರಾಜದಲ್ಲಿನ ಒಂದೊಂದು ಜಿಲ್ಲೆಗಳು ಒಂದೊಂದು ವಿಶೇಷತೆಗಳನ್ನು ಹೊಂದಿವೆ. ಉದಾಹರಣೆಗೆ ಧಾರವಾಡ-ಪೇಡಾನಗರಿ, ದಾವಣಗೆರೆ-ಬೆಣ್ಣೆನಗರಿ, ಮಂಡ್ಯ-ಸಕ್ಕರೆ ನಾಡು, ಮೈಸೂರು-ಸಾಂಸ್ಕೃತಿಕ ನಗರಿ, ಮಂಗಳೂರು-ಕಡಲನಗರಿ, ಉಡುಪಿ-ಕೃಷ್ಣನಗರಿ, ಬೆಳಗಾವಿ-ಕುಂದಾಮಗರಿ, ಬೆಂಗಳೂರು-ತೋಟಗಳ ನಗರಿ ಹೀಗೆ ಹಲವು ಜಿಲ್ಲೆಗಳು ಒಂದೊಂದು ವಿಶೇಷತೆಗಳನ್ನು ಪಡೆದಿವೆ.

ಇನ್ನು ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರವಾಸೋದ್ಯಮದ ಮೂಲಕ ಅತೀ ಹೆಚ್ಚು ಆದಾಯ ಬರುತ್ತದೆ. ಇನ್ನು ಕೆಲವು ಜಿಲ್ಲೆಗಳಿಗೆ ತಂತ್ರಜ್ಞಾನ, ವಿಜ್ಞಾನ, ಶಿಕ್ಷಣಕ್ಕೆ, ವಾಣಿಜ್ಯ ಕ್ಷೇತ್ರಗಳಿಂದ ಆದಾಯ ಹರಿದುಬರುತ್ತದೆ. ಹಾಗಾದರೆ 2024ನೇ ಸಾಲಿನಲ್ಲಿ ಯಾವೆಲ್ಲ ಜಿಲ್ಲೆಗಳು ಎಷ್ಟು ತಲಾ ಆದಾಯವನ್ನು ಒಳಗೊಂಡಿದೆ ಹಾಗೂ ಈ ಪೈಕು ಟಾಪ್‌ 3 ಶ್ರೀಮಂತ ಜಿಲ್ಲೆಗಳು ಯಾವುವು ಅಂತಲೂ ಇಲ್ಲಿ ಮಾಹಿತಿ ನೀಡಲಾಗಿದೆ ತಿಳಿಯಿರಿ.

ತಲಾ ಆದಾಯ ಲೆಕ್ಕದಲ್ಲಿ ನೋಡುವುದಾದರೆ, ಕಲಬುರಗಿ- 1,39,361 ರೂಪಾಯಿ, ಬೆಳಗಾವಿ- 1,49,710, ಬೀದರ್‌- 1,52,141, ಕೊಪ್ಪಳ- 1,52,489, ಯಾದಗಿರಿ-1,53,247, ಹಾವೇರಿ- 1,57,931, ವಿಜಯನಗರ- 1,59,868, ರಾಯಚೂರು- 1,64,705, ವಿಜಯಪುರ- 1,69,253, ಗದಗ- 1,69,704, ಚಿತ್ರದುರ್ಗ- 1,77,777, ಕೋಲಾರ- 1,87,284, ದಾವಣಗೆರೆ- 1,93,151 ರೂಪಾಯಿ ತಲಾ ಆದಾಯವನ್ನು ಹೊಂದಿವೆ.

ಚಿಕ್ಕಬಳ್ಳಾಪುರ- 2,00,424, ಚಾಮರಾಜನಗರ- 2,02,494, ಮೈಸೂರು- 2,15,398, ಉತ್ತರ ಕನ್ನಡ- 2,20,984, ಬಾಗಲಕೋಟೆ- 2,26,482, ಧಾರವಾಡ- 2,31,939, ಮಂಡ್ಯ- 2,37,220, ಹಾಸನ- 2,38,029, ತುಮಕೂರು- 2,45,735, ರಾಮನಗರ- 2,49,998, ಕೊಡಗು- 2,60,558, ಬಳ್ಳಾರಿ-2,78,538, ಶಿವಮೊಗ್ಗ- 2,90,893, ಬೆಂಗಳೂರು ಗ್ರಾಮಾಂತರ- 2,91,083, ಚಿಕ್ಕಮಗಳೂರು-3,77,968, ಉಡುಪಿ- 4,54,274, ದಕ್ಷಿಣ ಕನ್ನಡ- 4,92,074, ಬೆಂಗಳೂರು ನಗರ- 7,60,362,

ಟಾಪ್‌ 3 ಶ್ರೀಮಂತ ನಗರಳು ಹಾಗೂ ತಲಾ ಆದಾಯ

1. ಬೆಂಗಳೂರು ನಗರ- ₹7,60,362

2. ದಕ್ಷಿಣ ಕನ್ನಡ- ₹4,92,074

3. ಉಡುಪಿ- ₹4,54,274


Spread the love

About Laxminews 24x7

Check Also

ಶಾಸಕ ಅಭಯ ಪಾಟೀಲರನ್ನು ಹೊತ್ತುಕೊಂಡು ವ್ಯಾನ್ ಗೆ ಹಾಕಿದ ಪೊಲೀಸರು

Spread the love ಬೆಳಗಾವಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ ದಿನವನ್ನು ವಿರೋಧಿಸಿ, ಕಾಂಗ್ರೆಸ್ ಕ್ಷಮೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ