ಚಿಕ್ಕಬಳ್ಳಾಪುರ, ಮೇ.26: ಜಿಲ್ಲೆಯ ಗೌರಿಬಿದನೂರು(Gauribidanur) ನಗರದ ಸಾಯಿಕೃಷ್ಣ ಫಂಕ್ಷನ್ ಹಾಲ್ನಲ್ಲಿ ನಡೆದಿದ್ದ ಮದುವೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಚಿನ್ನದ ಸರ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಖದೀಮನಿಗೆ ಮದುವೆ ಮನೆಯವರೇ ಸೇರಿ ಧರ್ಮದೇಟು ಕೊಟ್ಟು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಂಧ್ರದ ಮುಲ್ಲಮೋತುಕಪಲ್ಲಿ ಗ್ರಾಮದ ನರೇಶ್ ಎಂಬಾತ ಬಂಧಿತ ಆರೋಪಿ. ಈ ಕುರಿತು ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Laxmi News 24×7