ವಿಜಯಪುರ, ಮೇ.26: ಜಿಲ್ಲೆಯಲ್ಲಿ ಅನೇಕ ಕೆರೆಗಳು ಹಾಗೂ ಜಲ ಮೂಲಗಳು ಬತ್ತಿ ಹೋಗಿವೆ. ಸದ್ಯ ಮಳೆಗಾಲ ) ಆರಂಭವಾಗಿದ್ದರೂ ಕೆರೆಗಳಿಗೆ ನೀರು ಭರ್ತಿಯಾಗುವಷ್ಟು ಮಳೆಯಾಗಿಲ್ಲ.
ಒಂದೆರೆಡು ಬಾರಿ ಮಳೆಯಾಗಿದ್ದರೂ ಮತ್ತೇ ಮಳೆ ಮಾಯವಾಗಿ ವಾರವೇ ಆಗಿದೆ. ವಿಜಯಪುರತಾಲೂಕಿನ ಜಂಬಗಿಗ್ರಾಮದಲ್ಲಿ 500 ಎಕರೆ ವಿಸ್ತಾರದಲ್ಲಿರುವ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ ಕೆರೆ, ನೀರಿಲ್ಲದೇ ಖಾಲಿ ಖಾಲಿಯಾಗಿದೆ.

ಜಂಬಗಿ, ಆಹೇರಿ, ಶಿರಕನಹಳ್ಳಿ, ಅಂಕಲಗಿ, ಹೊನ್ನಳ್ಳಿ ಹಾಗೂ ಇತರೆ ಗ್ರಾಮಗಳ ಜನ-ಜಾನುವಾರುಗಳ ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರಿನ ಮೂಲವಾಗಿತ್ತು.
Laxmi News 24×7