Breaking News

7 ವರ್ಷ ಬಳಿಕ 13 ಕೋಟಿ ರೂ. ವೆಚ್ಚದ ಗೋದಾಮು‌ ಕಾಮಗಾರಿ ಆರಂಭ:

Spread the love

ಬೀದರ್, ಮೇ 26: ರೈತರು (Farmers) ಬೆಳೆಸಿದ ದವಸ ಧಾನ್ಯವನ್ನ ಸಂಗ್ರಹಿಸಲು ಬೃಹತ್ ಗೋದಾಮು ನಿರ್ಮಿಸಲಾಗುತ್ತಿತ್ತು.

13 ಕೋಟಿ ರೂ. ವೆಚ್ಚದ ಗೋದಾಮು (godown) ಕಾಮಗಾರಿ ಅರ್ಧಕ್ಕೆ ಬಿಟ್ಟು ಗುತ್ತಿಗೆದಾರ ಪಲಾಯನ ಮಾಡಿದ್ದ.7 ವರ್ಷ ಬಳಿಕ 13 ಕೋಟಿ ರೂ. ವೆಚ್ಚದ ಗೋದಾಮು‌ ಕಾಮಗಾರಿ ಆರಂಭ: ರೈತರು ಖುಷ್​!

ಸ್ಥಳೀಯ ನಿವಾಸಿಯೊಬ್ಬರು ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಎರಡು ವರ್ಷದ ಸತತ ಹೋರಾಟದ ಬಳಿಕ ಗೋದಾಮು ಕಾಮಗಾರಿ ಆರಂಭವಾಗಿದ್ದು ರೈತರ ಖಷಿ ಹೆಚ್ಚಿಸಿದೆ.

ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಗುತ್ತಿಗೆದಾರ ಪಲಾಯನ

ರೈತರ ದವಸ ಧಾನ್ಯಗಳನ್ನ ಸಂಗ್ರಹ ಮಾಡುವ ಉದ್ದೇಶದಿಂದ ಬೀದರ್ ಜಿಲ್ಲೆಯ ಔರಾದ್ ಪಟ್ಣದಲ್ಲಿ 2015-16 ನೇ ಸಾಲಿನಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಉಗ್ರಾಣ ನಿಗಮದಿಂದ ಔರಾದ್ ಪಟ್ಟಣದ ರೈತ ಭವನದ ಹಿಂದೆ ಬೃಹತ್ ಎರಡು ಗೋದಾಮನ್ನ ನಿರ್ಮಿಣ ಮಾಡಲಾಗುತ್ತಿತ್ತು.

ಗೋದಾಮು ಕಾಮಗಾರಿಯನ್ನ ಅರ್ಧಕ್ಕೆ ನಿಲ್ಲಿಸಿ ಗುತ್ತಿಗೆದಾರ ಪಲಾಯನ ಮಾಡಿದ್ದ. ಬಂದ್ ಆಗಿದ್ದ ಗೋದಾಮು ಕಾಮಗಾರಿ ಇಂದು, ನಾಳೆ ಆರಂಭವಾಗುತ್ತದೆಂದು ರೈತರು ಚಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದರು.

ಆದರೆ ಐದು ವರ್ಷಗಳು ಕಳೆದರೂ ಕೂಡಾ ಕಾಮಗಾರಿ ಆರಂಭವಾಗುವ ಯಾವ ಲಕ್ಷಣಗಳು ಕೂಡ  ಗೋಚರಿಸಲಿಲ್ಲ.


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ