Breaking News

ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್‌ಐ

Spread the love

ಧಾರವಾಡ: ಬೈಕ್ ನಲ್ಲಿ ಹೊರಟಿದ್ದ ವ್ಯಕ್ತಿಯನ್ನು ದೋಚಿ ಪರಾರಿಯಾದ ಇಬ್ಬರು ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ‌ ಹಿಡಿದ ಘಟನೆ ನಡೆದಿದೆ.

ಧಾರವಾಡ ಗ್ರಾಮೀಣ ಠಾಣೆಯ ಪಿಎಸ್‌ಐ ರೇಣುಕಾ ಐರಾಣಿ ನೇತೃತ್ವದಲ್ಲಿ ಬಂಧಿಸಲಾಗಿದ್ದು, ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ‌.

Dharwad: ದರೋಡೆಕೋರರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದ ಲೇಡಿ ಪಿಎಸ್‌ಐ

ಅಳ್ನಾವರ ರಸ್ತೆಯ ಮಂಡಿಹಾಳ ಗ್ರಾಮದ ಹತ್ತಿರ 4 ಜನ ದರೋಡೆಕೋರರು ಬೈಕ್ ನಲ್ಲಿ ಹೋಗುತ್ತಿದ್ದವನನ್ನ ನಿಲ್ಲಿಸಿ, ಅವನಿಂದ ಮೊಬೈಲ್, ಹಣದ ಪರ್ಸ್ ದೋಚಿಕೊಂಡು ಹೊರಟಿದ್ದಾರೆ‌. ಈ ಬಗ್ಗೆ ಸ್ಥಳೀಯರು ಕೂಡಲೇ ಮಹಿಳಾ ಪಿಎಸ್‌ಐ ರೇಣುಕಾ ಐರಾಣಿ ಅವರಿಗೆ ಕರೆ ಮಾಡಿ, ಘಟನೆ ಕುರಿತು ಹೇಳಿದಾಗ, ತಕ್ಷಣವೇ ಪಿಎಸ್‌ಐ ರೇಣುಕಾ ಐರಾಣಿಯವರು ತಮ್ಮ ಸ್ವಂತ ಕಾರಲ್ಲಿ ಘಟನಾ ಸ್ಥಳಕ್ಕೆ ಧಾವಿಸಿ ದರೋಡೆಕೋರರನ್ನು ಹಿಂಬಾಲಿಸಿ 2 ಜನ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಿಎಸ್‌ಐ ರೇಣುಕಾ ಐರಾಣಿಯವರ ಕರ್ತವ್ಯ ನಿಷ್ಠೆ ಮತ್ತು ದೈರ್ಯ ಪ್ರದರ್ಶಿಸಿ, ದರೋಡೆಕೋರರನ್ನು ಬಂದಿಸುವಲ್ಲಿ ಯಶಸ್ವಿಯಾಗದ್ದರಿಂದ ಅವರ ಕಾರ್ಯವನ್ನು ಶ್ಲಾಘಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ಅವರು ಬಹುಮಾನವನ್ನು ನೀಡಿ ಗೌರವಿಸಿದ್ದಾರೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ