Breaking News

ಅಂಜಲಿ ಕುಟುಂಬಕ್ಕೆ ಜೋಳಿಗೆ ಹಣ: ಚಂದ್ರಶೇಖರ್ ಸ್ವಾಮೀಜಿ

Spread the love

ಹುಕ್ಕೇರಿ (ಬೆಳಗಾವಿ ಜಿಲ್ಲೆ): ಹುಬ್ಬಳ್ಳಿಯಲ್ಲಿ ಹತ್ಯೆಯಾದ ಅಂಜಲಿ ಅಂಬಿಗೇರ ಕುಟುಂಬಕ್ಕೆ ಹುಕ್ಕೇರಿ ಹಿರೇಮಠದಲ್ಲಿ ನಡೆದ ಲಿಂಗದೀಕ್ಷೆ (ಶಿವದೀಕ್ಷಾ) ಪಡೆದ ವಟುಗಳು ಭೀಕ್ಷಾಟನೆ ಮೂಲಕ ಜೋಳಿಗೆಯಲ್ಲಿ ತಂದ ₹ 50 ಸಾವಿರ ನೀಡುವುದಾಗಿ ಸ್ಥಳೀಯ ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಹೇಳಿದರು.

 

ಹಿರೇಮಠದ ಗುರುಶಾಂತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಜಂಗಮದೀಕ್ಷೆ ಕಾರ್ಯಕ್ರಮದಲ್ಲಿ ಜಂಗಮರ ಜೋಳಿಗೆಯಲ್ಲಿ ಬಂದ ಹಣವನ್ನು ಮಠಕ್ಕಾಗಿ ಬಳಸುತ್ತೇವೆ. ಆದರೆ ಕುಟುಂಬ ಸಾಗಿಸುತ್ತಿದ್ದ ಅಂಜಲಿ ಅಂಬಿಗೇರ ಅವರ ಹತ್ಯೆಯಿಂದ ಕುಟುಂಬ ಸಂಕಷ್ಟಕ್ಕೀಡಾಗಿದೆ. ಈ ಹಣವನ್ನು ಸಹಾಯಾರ್ಥವಾಗಿ ನೀಡಲು ನಿರ್ಧರಿಸಿದ್ದೇವೆ’ ಎಂದರು.

ಅಂಜಲಿ ಕುಟುಂಬಕ್ಕೆ ಜೋಳಿಗೆ ಹಣ: ಚಂದ್ರಶೇಖರ್ ಸ್ವಾಮೀಜಿ

ವೀರಶೈವ ಧರ್ಮದ ಮಠಗಳು ಕೇವಲ ಪೂಜೆ ಪುನಸ್ಕಾರ ಮಾಡಲು ಸೀಮಿತವಾಗದೆ, ಕಷ್ಟದಲ್ಲಿ ನೊಂದ ಕುಟುಂಬಕ್ಕೆ ನೆರವಾಗುವ ಕಾರ್ಯ ಕೂಡಾ ಮಾಡುತ್ತಿವೆ. ಭಾನುವಾರ ಹುಕ್ಕೇರಿ ಹಿರೇಮಠದಲ್ಲಿ ನೂರಾರು ವಟುಗಳಿಗೆ ನಡೆದ ಲಿಂಗದೀಕ್ಷೆಯಲ್ಲಿ ವಟುಗಳ ಜೋಳಿಗೆಯಲ್ಲಿ ಬಂದ ಹಣ ಗುರುವಿಗೆ ಕಾಣಿಕೆಯಾಗಿ ಸಲ್ಲಬೇಕು. ಆದರೆ ಆ ಹಣವನ್ನು ನೆರವಿನ ಕೆಲಸಕ್ಕೆ ಬಳಸಿದ್ದು ಸಾರ್ಥಕ’ ಎಂದು ಹೇಳಿದರು.

ಸರ್ಕಾರ ಕೂಡಲೇ ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಕೊಲೆ ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಮಠದಿಂದ ಆರಂಭಗೊಂಡ ರಥೋತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಥಕ್ಕೆ ಭಕ್ತರು ತುಂಬಿದ ಕೊಡದ ನೀರು ಹಾಕಿ ಪೂಜೆ ಸಲ್ಲಿಸಿದರು.

ವಿರಕ್ತಮಠದ ಶಿವಬಸವ ಸ್ವಾಮೀಜಿ, ಮಲ್ಲಯ್ಯ ಮಠಪತಿ, ಸಂಸ್ಕೃತ ಪಾಠಶಾಲೆಯ ಸಂಪತ್ ಕುಮಾರ ಶಾಸ್ತ್ರಿ, ಚಂದ್ರಶೇಖರ್ ಶಾಸ್ತ್ರಿ, ಮಹಾಂತೇಶ ಹಿರೇಮಠ, ಈರಣ್ಣ ಗಣಾಚಾರಿ, ಮುಖ್ಯಾಧ್ಯಾಪಕ ಶಿವಾನಂದ ಜಿನರಾಳಿ, ಮುಖಂಡರಾದ ಆನಂದ ಪಟ್ಟಣಶೆಟ್ಟಿ ಸೇರಿದಂತೆ ನೂರಾರು ಭಕ್ತರು ಇದ್ದರು.

 ಹುಕ್ಕೇರಿ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಿತು


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ