Breaking News

ಪೋಷಕರಿಗೆ ಗುಡ್ ನ್ಯೂಸ್ : ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ‘LKG, UKG’ ಆರಂಭ!

Spread the love

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‍ಕೆಜಿ ಮತ್ತು ಯುಕೆಜಿ ಆರಂಭಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. 4-5 ನೇ ವರ್ಷದ ಮಕ್ಕಳಿಗಾಗಿ ಎಲ್ ಕೆಜಿ ಮತ್ತು ಯುಕೆಜಿ ಆರಂಭಿಸುವಂತೆ ಪೋಷಕರಿಂದ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಪೋಷಕರಿಗೆ ಗುಡ್ ನ್ಯೂಸ್ : ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ 'LKG, UKG' ಆರಂಭ!

ಸರ್ಕಾರವು ಈ ವರ್ಷ ಅಕ್ಷರ ಆವಿಷ್ಕಾರದ ಯೋಜನೆಯಡಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ, ಯುಕೆಜಿಯ ಹಾಗೂ ದ್ವಿಭಾಷಾ (ಕನ್ನಡ ಮತ್ತು ಆಂಗ್ಲ ಮಾಧ್ಯಮ) ತರಗತಿಗಳನ್ನು ನಡೆಸಲು ಮುಂದಾಗಿದ್ದು, ಮಕ್ಕಳ ವೈಯಕ್ತಿಕ ಬೆಳವಣಿಗೆಯಲ್ಲಿ ಎರಡೂವರೆ ವರ್ಷದಿಂದ ಆರು ವರ್ಷ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಕರು ಅರ್ಹ ಶೈಕ್ಷಣಿಕ ಅರ್ಹತೆ ಮತ್ತು ತರಬೇತಿ ಪಡೆದಿದ್ದರೆ ನಿಶ್ಚಿತವಾಗಿಯೂ ಈ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯಾಗುತ್ತದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಡುತ್ತಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳಲ್ಲಿ ಇಸಿಸಿಇ, ಎಲ್‌ಕೆಜಿ ಹಾಗೂ ಯುಕೆಜಿಯ ತರಗತಿಗಳು ಹಾಗೂ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ತರಗತಿಗಳು ಪ್ರಕಾರ ಆರಂಭಗೊಳ್ಳುತ್ತಿದ್ದು, ಪಾಲಕರು ಇದರ ಸದುಪಯೋಗ ಶಿಕ್ಷಣ ಇಲಾಖೆ ತಿಳಿಸಿದೆ.

ಅರ್ಹ ಶಾಲೆಗಳಲ್ಲಿ ಹೊಸ ತರಗತಿಗಳನ್ನು ಪ್ರಾರಂಭಿಸಲು 2024-25ನೇ ಶೈಕ್ಷಣಿಕ ಸಾಲಿನ ಆರಂಭಿಕ ದಿನಾಂಕವಾದ ಮೇ 29ರ ಒಳಗಾಗಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ


Spread the love

About Laxminews 24x7

Check Also

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿರಂತರ: ಮಾತಾ ಗಂಗಾದೇವಿ

Spread the love ದಾವಣಗೆರೆ: ನಮ್ಮ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಿರಂತರವಾಗಿ ಇದ್ದೇ ಇರುತ್ತದೆ ಎಂದು ಬಸವ ಧರ್ಮ ಪೀಠದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ