ಪವಿತ್ರಾ ಜಯರಾಂ ಮತ್ತು ಅವರ ಸ್ನೇಹಿತ ಚಂದ್ರಕಾಂತ್ ನಿಧನದ ನಂತರ ಇಬ್ಬರ ಸಂಬಂಧದ ಬಗ್ಗೆ ಚರ್ಚೆ ನಡೆಯುತ್ತಿದೆ. ಕೆಲವರು ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರು ಎಂದು ಹೇಳಿದರೆ ಇನ್ನೂ ಕೆಲವರು ಇಬ್ಬರು ಜೊತೆಯಲ್ಲಿಯೇ ವಾಸ ಮಾಡ್ತಿದ್ದರು ಎನ್ನುವ ಮಾತುಗಳನ್ನಾಡುತ್ತಿದ್ದಾರೆ.
ಇನ್ನೂ.. ಚಂದ್ರಕಾಂತ್ ಅವರ ಪತ್ನಿ ಶಿಲ್ಪಾ ಪ್ರೇಮಾ, ಪವಿತ್ರಾ ನಮ್ಮ ಬದುಕಿನಲ್ಲಿ ಬಂದ ನಂತರ ನಮ್ಮ ಜೀವನವೇ ಹಾಳಾಯ್ತು ಎಂದು ಕಣ್ಣೀರು ಹಾಕಿದ್ದಾರೆ. ಚಂದ್ರಕಾಂತ್ ಅವರ ತಾಯಿ ಕೂಡ ಪವಿತ್ರಾಳಿಂದಲೇ ಇದೆಲ್ಲಾ ನಡೆದಿದೆ.
ನನ್ನ ಮಗನ್ನು ನಮ್ಮ ಮನೆಗೆ ಬರದಂತೆ ಮಾಡಿದ್ದಾಳೆ. ಪವಿತ್ರಾ ಅವನಿಗೆ ಏನು ಮಾಡಿದ್ದಳೋ ಏನೋ ಗೊತ್ತಿಲ್ಲ, ನನ್ನ ಎಲ್ಲಾ ಸರ್ವಸ್ವ ಪವಿತ್ರಾ, ಅವಳೇ ನನ್ನ ಹೆಂಡತಿ ಎನ್ನುತ್ತಿದ್ದ ಎಂದು ಬಿಕ್ಕಿದ್ದಾರೆ. ಎದೆಯೆತ್ತರಕ್ಕೆ ಬೆಳೆದ ಮಗನನ್ನ ಕಳೆದುಕೊಂಡು ದು:ಖದಲ್ಲಿದ್ದಾರೆ.
ಇದರ ನಡುವೆ ಪವಿತ್ರಾ ಜಯರಾಂ ಅವರ ಮಗಳು ಪ್ರತೀಕ್ಷಾ ತಮ್ಮ ತಾಯಿ ಮತ್ತು ಚಂದ್ರಕಾಂತ್ ನಡುವೆ ಇದ್ದ ಸಂಬಂಧದ ಬಗ್ಗೆ ನಿಮ್ಮ ನಿಮ್ಮ ಇಷ್ಟಾನುಸಾರ ಕಥೆ ಹೆಣೆಯಬೇಡಿ ಎಂದಿದ್ಧಾರೆ. ನಮ್ಮಷ್ಟಕ್ಕೆ ನಮ್ಮನ್ನು ಬದುಕಲು ಬಿಡಿ ಎಂದು ಮನವಿಯನ್ನೂ ಮಾಡಿದ್ದಾರೆ.