Breaking News

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

Spread the love

ಬೆಂಗಳೂರು: ಅಶ್ಲೀಲ ವಿಡಿಯೋ, ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ಹೋಗಿದ್ದು, ಇಲ್ಲಿಯವರೆಗು ಜರ್ಮನಿಯಲ್ಲಿದ್ದಾರೆ ಎಂದು ಮಾಹಿತಿ ಇತ್ತು. ಇದೀಗ ಪ್ರಜ್ವಲ್​ ರೇವಣ್ಣ ಜರ್ಮನಿಯಿಂದ, ಲಂಡನ್​ಗೆ ಹೋಗಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಜರ್ಮಿನಿಯಿಂದ ಲಂಡನ್‌ಗೆ ಹಾರಿದ ಪ್ರಜ್ವಲ್​ ರೇವಣ್ಣ

ಇಂಗ್ಲೆಂಡ್​ನಲ್ಲಿನ ಭಾರತದ ಉದ್ಯಮಿಯೊಬ್ಬರ ಸಹಾಯದಿಂದ ಸಂಸದ ಪ್ರಜ್ವಲ್​ ರೇವಣ್ಣ ಮತ್ತು ದುಬೈ ಮೂಲದ ಒರ್ವ ಮತ್ತು ಬೆಂಗಳೂರು ಮೂಲದ ಒರ್ವ ಸ್ನೇಹಿತರ ಜೊತೆ ರೈಲು ಮೂಲಕ ಜರ್ಮಿನಿಯ ಮ್ಯೂನಿಚ್ ಲಂಡನ್‌ಗೆ ಹೋಗಿರುವ ಬಗ್ಗೆ ಮಾಹಿತಿ ದೊರೆತಿದೆ.

ಪ್ರಜ್ವಲ್​ ರೇವಣ್ಣ ಈಗಾಗಲೇ 2 ಬಾರಿ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ. ಮೇ 03 ಮತ್ತು 15 ರಂದು ಭಾರತಕ್ಕೆ ಬರಲು ವಿಮಾನದ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿದ್ದಾರೆ. ಹೀಗಾಗಿ ಅಧಿಕಾರಿಗಳು ಮುಂದಿನ ಟಿಕೆಟ್ ಬುಕ್ಕಿಂಗ್ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ.


Spread the love

About Laxminews 24x7

Check Also

ಲಾರಿ- ಖಾಸಗಿ ಬಸ್‌ ಡಿಕ್ಕಿ: 13 ಮಂದಿ ಸಜೀವ ದಹನ

Spread the loveಆಂಧ್ರ ಪ್ರದೇಶ: ಆಂಧ್ರದ ಮಾರ್ಕಪುರಂ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಾಯವರಂ ಬಳಿಯ ಪಲಕಲಾ ಎಂಬಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ