Breaking News

Pen drive ಕೊಡುವೆ, ತನಿಖೆ ನಡೆಸುತ್ತೀರಾ?: ಸಿಎಂಗೆ ಎಚ್‌ಡಿಕೆ ಸವಾಲು

Spread the love

ಮೈಸೂರು: “ನನ್ನ ಬಳಿಯಿರುವ ಭ್ರಷ್ಟಾ ಚಾರದ ಮಾಹಿತಿಯ ಪೆನ್‌ಡ್ರೈವ್‌ ನಿಮಗೆ ಕೊಡುತ್ತೇನೆ. ಅದರ ವಿರುದ್ಧ ಕ್ರಮ ತೆಗೆದು ಕೊಳ್ಳುವ ತಾಕತ್ತು ನಿಮಗಿದೆಯೇ?’- ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹಾಕಿರುವ ಸವಾಲು.

 

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, “ನನ್ನ ಬಳಿಯಿರುವ ಪೆನ್‌ಡ್ರೈವ್‌ನಲ್ಲಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಹಣ ಹೊಂದಿಸಲು ಯಾವ ರೀತಿ ಪರದಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇದೆ. ಆ ಪೆನ್‌ಡ್ರೈವ್‌ ಕೊಟ್ಟರೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರಾ?’ ಎಂದು ಪ್ರಶ್ನಿಸಿದರು. ಅಲ್ಲದೆ, “ನನ್ನನ್ನು ಹಿಟ್‌ ಅಂಡ್‌ ರನ್‌ ಎನ್ನುವ ಸಿಎಂ ಈ ಹಿಂದೆ ದಾಖಲೆಗಳ ಸಹಿತ ನಾನು ಮಾಡಿದ ಆರೋಪಗಳಿಗೆ ಯಾವ ಕ್ರಮ ಕೈಗೊಂಡಿದ್ದಾರೆ? ಈ ಸರಕಾರಕ್ಕೆ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಪೆನ್‌ಡ್ರೈವ್‌ ಕೊಡುತ್ತಿಲ್ಲ’ ಎಂದರು.Pen drive ಕೊಡುವೆ, ತನಿಖೆ ನಡೆಸುತ್ತೀರಾ?: ಸಿಎಂಗೆ ಎಚ್‌ಡಿಕೆ ಸವಾಲು

ಎಚ್‌.ಡಿ. ರೇವಣ್ಣ ವಿರುದ್ಧದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ(ವಿಶೇಷ ತನಿಖಾ ತಂಡ) ತನಿಖೆ ಸರಿಯಾಗಿ ನಡೆಯುತ್ತಿಲ್ಲ. ಎಸ್‌ಐಟಿಯನ್ನು ಕಾಣದ ಕೈಗಳು ನಿಯಂತ್ರಿಸುತ್ತಿವೆ. ಪ್ರಕರಣದ ಕುರಿತು ಎಸ್‌ಐಟಿ ಅಧಿಕಾರಿಗಳು ಗೃಹ ಸಚಿವರಿಗೆ ಮಾಹಿತಿ ಕೊಡದೆ ಬೇರೆಯವರಿಗೆ ಮಾಹಿತಿ ನೀಡುತ್ತಿದ್ದು, ಇದರಿಂದ ಎಸ್‌ಐಟಿ ತನಿಖೆ ಸರಿಯಾಗಿ ಆಗುತ್ತಿಲ್ಲ ಎಂದರು.


Spread the love

About Laxminews 24x7

Check Also

ಕೇಂದ್ರದ ದ್ವೇಷ ರಾಜಕಾರಣ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಸುವರ್ಣಸೌಧ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ

Spread the loveಬೆಳಗಾವಿ: ಕೇಂದ್ರ ಸರ್ಕಾರ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ