ಬೆಂಗಳೂರು: ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಮೃತಪಟ್ಟಿರುವಂತಹ ಘಟನೆ ಬಾಗಲಗುಂಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್(28) ಮೃತ ದುರ್ದೈವಿ.
ಅಮಿತ್ ಕುಮಾರ್ ಜಿಮ್ ಟ್ರೈನರ್ (Gym trainer) ಆಗಿದ್ದು, 10 ವರ್ಷದ ಹಿಂದೆ ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬಂದಿದ್ದ.
ಒಂದು ವರ್ಷದ ಹಿಂದೆ ಜಿಮ್ ಸಮೀಪವೇ ಓರ್ವ ಯುವತಿಯನ್ನು ಪ್ರೀತಿಸಿದ್ದ. ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದರು.
ಪೋಷಕರ ವಿರೋಧದ ನಡುವೆಯೂ ಅಮಿತ್ ಕುಮಾರ್ ವಿವಾಹ ನಡೆದಿತ್ತು. ಪತ್ನಿ ನರ್ಸಿಂಗ್ ಕೋರ್ಸ್ಗೆ ಸೇರಿದ ಬಳಿಕ ಪತಿಗೆ ಸಮಯ ನೀಡ್ತಿರಲಿಲ್ಲ. ಫ್ರೆಂಡ್ಸ್ ಅಂತೇಳಿ ಪದೇ ಪದೆ ಪೋನ್ ಕಾಲ್ ನಲ್ಲಿರ್ತಿದ್ದಳಂತೆ. ಇದೇ ವಿಚಾರಕ್ಕೆ ಆಗಾಗ ಪತಿ-ಪತ್ನಿ ನಡುವೆ ಗಲಾಟೆ ಆಗುತ್ತಿತ್ತು. ವೈಮನಸ್ಸು ಜೋರಾದ ಹಿನ್ನೆಲೆಯಲ್ಲಿ ಪತಿಯನ್ನು ತೊರೆದು ಪತ್ನಿ ಬೇರೆಡೆ ವಾಸವಿದ್ದಳು. ಆಗ ಮನೆಗೆ ವಾಪಸ್ ಬರುವಂತೆ ಪದೇ ಪದೇ ಕರೆ ಮಾಡಿ ಅಮಿತ್ ಮನವಿ ಮಾಡಿಕೊಂಡಿದ್ದರಂತೆ.