ಬೆಂಗಳೂರು: ಕೊಳಚೆ ನೀರು ಸಂಸ್ಕರಣಾ ಘಟಕದಿಂದ ಸಂಸ್ಕರಿತ ನೀರು ಪಡೆಯಬೇಕಿದ್ದ ವಿಭೂತಿಪುರ ಕೆರೆಯು ಒಳಹರಿವಿಗೆ ಸಂಪರ್ಕ ಕಲ್ಪಿಸುವ ಮಳೆನೀರು ಚರಂಡಿ (ರಾಜ ಕಾಲುವೆ) ಸರಿಯಾಗಿ ನಿರ್ವಹಣೆಯಾಗದ ಕಾರಣ ಕಸ ಮತ್ತು ಕೊಚ್ಚೆಯಿಂದ ತುಂಬಿಕೊಂಡಿದೆ.ಹೂಳು ತೆಗೆಯುವಲ್ಲಿ ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಇತ್ತೀಚೆಗಷ್ಟೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಕಾರ್ಯಪಾಲಕ ಎಂಜಿನಿಯರ್ ಭೂಪ್ರದಾ ಅವರು ಮೇ ಮೊದಲ ವಾರ ವಿಭೂತಿಪುರ ಕೆರೆಯ 1.5 ಎಕರೆ ಜೌಗು ಪ್ರದೇಶವನ್ನು ಹೂಳು ತೆಗೆಯಲಾಗಿದ್ದು, 1.5 ಎಂಎಲ್‌ಡಿ ಕೊಳಚೆ ನೀರು ಸಂಸ್ಕರಣಾ ಘಟಕದಿಂದ (STP) ಸಂಸ್ಕರಿಸಿದ ನೀರನ್ನು ಮೊದಲು ಕೆರೆಗೆ ಬಿಡಲಾಗುವುದು ಎಂದು ಹೇಳಿದ್ದರು.
ಕೆರೆಯನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸುವ ಯೋಜನೆಯನ್ನು ಹೊಂದಿದ್ದರು ಆದರೆ ಇದು ಮಳೆನೀರಿನ ಚರಂಡಿಗಳಿಂದ ಹರಿಯುವ ಕೊಳಚೆಯಿಂದ ತುಂಬಿಹೋಗಿತ್ತು. ಕಳೆದ ಕೆಲ ದಿನಗಳಿಂದ ಸುರಿದ ಮಳೆಗೆ ಕೆರೆಯಲ್ಲಿ ಪ್ಲಾಸ್ಟಿಕ್ ವಸ್ತುಗಳು ಸೇರಿ ಕಸ ತುಂಬಿತ್ತು.
ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ಜಂಟಿ ಆಯುಕ್ತ ಆರ್.ಪ್ರತಿಭಾ, ಪೊಲೀಸರು ಪರಿಸ್ಥಿತಿಯನ್ನು ಅರಿತುಕೊಂಡು ಮಳೆನೀರು ಚರಂಡಿಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ ಎಂದರು.