Breaking News

ತಲೆಮರೆಸಿಕೊಂಡಿದ್ದ ಪೊಲೀಸರ ಇನ್ಸ್‌ಪೆಕ್ಟರ್ ಮನೆಯಿಂದ 1 ಕೋಟಿ ನಗದು, ಕೆಜಿ ಚಿನ್ನ ವಶ

Spread the love

ತ್ರಪತಿ ಸಂಭಾಜಿನಗರ, ಮೇ 17-ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ ಪೋಲೀಸ್‌‍ ಅಧಿಕಾರಿ ಮನೆಯಲ್ಲಿ 1.08 ಕೋಟಿ ರೂಪಾಯಿ ನಗದು ಮತ್ತು 72 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಮತ್ತು ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಲೆಮರೆಸಿಕೊಂಡಿದ್ದ ಪೊಲೀಸರ ಇನ್ಸ್‌ಪೆಕ್ಟರ್ ಮನೆಯಿಂದ 1 ಕೋಟಿ ನಗದು, ಕೆಜಿ ಚಿನ್ನ ವಶ

ಪೊಲೀಸ್‌‍ ಇನ್ಸ್‌ಪೆಕ್ಟರ್ ಹರಿಭಾವು ಖಾಡೆ (52) ಮನೆಯಲ್ಲಿ ಈ ಸಂಪತ್ತು ಪತ್ತೆಯಾಗಿದ್ದು, ಕಳೆದ ಮೇ 15 ರಂದು ವರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಅಪರಾಧ ಪ್ರಕರಣವೊಂದಲ್ಲಿ ಆರೋಪಿಗೆ ಸಹಾಯ ಮಾಡಲು ಹರಿಭಾವು ಖಾಡೆ ಮತ್ತು ಇತರ ಇಬ್ಬರ ವಿರುದ್ಧ 1 ಕೋಟಿ ರೂ.ಗೆ ಬೇಡಿಕೆಯಿಟ್ಟ ಬಗ್ಗೆ ದೂರು ಬಂದಿತ್ತು ಅದನ್ನು 30 ಲಕ್ಷಕ್ಕೆ ಇಳಿಸಿದ್ದರು.

ಆರಂಭಿಕ ಕಂತಿನ 5 ಲಕ್ಷ ರೂ.ಗಳನ್ನು ಸಂಗ್ರಹಿಸಿದ ನಂತರ ಆರೋಪಿಗಳಲ್ಲಿ ಒಬ್ಬನಾದ ಕುಶಾಕ್‌ ಜೈನ್‌ (29) ಅನ್ನು ಎಸಿಬಿ ಮೊದಲು ಬಲೆಗೆ ಬೀಳಿಸಿತು.ವಾರಂಟ್‌ ಪಡೆದ ನಂತರ ಎಸಿಬಿ ತಂಡ ಚಾಣಕ್ಯಪುರಿ ಪ್ರದೇಶದಲ್ಲಿರುವ ಖಾಡೆ ಅವರ ಮನೆಯನ್ನು ಶೋಧಿಸಿದರು ಈ ವೇಳೆ 1.08 ಕೋಟಿ ನಗದು, 970 ಗ್ರಾಂ ಚಿನ್ನಾಭರಣ ಹಾಗೂ 72 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 5.5 ಕೆಜಿ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ.


Spread the love

About Laxminews 24x7

Check Also

ರಾಯಬಾಗ: ರೇಬಿಸ್ ಲಸಿಕಾ ಅಭಿಯಾನಕ್ಕೆ ಚಾಲನೆ

Spread the love ರಾಯಬಾಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ರಾಮಕೃಷ್ಣ ಪಬ್ಲಿಕ್ ಸ್ಕೂಲ್ ಬೆಕ್ಕೇರಿ ಇವರ ಸಹಯೋಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ