Breaking News

RCB vs CSK: ಎರಡೂ ತಂಡಗಳಿಗೆ ಪ್ರಮುಖ ಆಲ್‌ರೌಂಡರ್‌ಗಳು ಅಲಭ್ಯ; ಹೇಗಿರಲಿದೆ ಪ್ಲೇಯಿಂಗ್ 11

Spread the love

ಪಿಎಲ್ 2024ರ ಪಂದ್ಯಾವಳಿಯಲ್ಲಿ ರಣ ರೋಚಕ ಪಂದ್ಯವೆಂದೇ ಬಿಂಬಿಸಲಾಗುತ್ತಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯ ಮೇ 18ರಂದು ನಡೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯವನ್ನು ಆಯೋಜಿಸಲಾಗುತ್ತಿದೆ.

ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.RCB vs CSK: ಎರಡೂ ತಂಡಗಳಿಗೆ ಪ್ರಮುಖ ಆಲ್‌ರೌಂಡರ್‌ಗಳು ಅಲಭ್ಯ; ಹೇಗಿರಲಿದೆ ಪ್ಲೇಯಿಂಗ್ 11

ಎಂಎಸ್ ಧೋನಿ ಅವರು ಕೊನೆಯ ಬಾರಿಗೆ ಚಿನ್ನಸ್ವಾಮಿ ಆಡುತ್ತಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಎರಡೂ ತಂಡಗಳ ಅಭಿಮಾನಿಗಳು ಮೈದಾನದಲ್ಲಿ ಪಂದ್ಯ ನೋಡಲು ಕಾತರರಾಗಿದ್ದಾರೆ.

ಪ್ಲೇ ಆಫ್‌ ತಲುಪಬೇಕಾದರೆ ಆರ್‌ಸಿಬಿ ಈ ಪಂದ್ಯವನ್ನು ಗೆಲ್ಲಲೇಬೇಕಿದೆ. ಸಿಎಸ್‌ಕೆ ಕೂಡ ಈ ಪಂದ್ಯ ಗೆದ್ದು ಪ್ಲೇ ಆಫ್ ತಲುಪುವ ಲೆಕ್ಕಾಚಾರದಲ್ಲಿದೆ. ಆರ್‌ಸಿಬಿ ಕ್ವಾಲಿಫೈ ಆಗಬೇಕಾದರೆ 18 ರನ್ ಅಂತರದಲ್ಲಿ ಗೆಲ್ಲಬೇಕು ಇಲ್ಲವೇ 18.1 ಓವರ್ ನಲ್ಲಿ ಚೇಸ್ ಮಾಡಬೇಕು.

ಪ್ರಮುಖ ಆಟಗಾರರು ಅಲಭ್ಯ

ಟಿ20 ವಿಶ್ವಕಪ್‌ಗೆ ಮೊದಲು ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಟಿ20 ಸರಣಿ ಆಡಲಿದ್ದು, ಐಪಿಎಲ್‌ನಲ್ಲಿ ಆಡುತ್ತಿರುವ ಇಂಗ್ಲೆಂಡ್ ಆಟಗಾರರು ತವರಿಗೆ ಮರಳಿದ್ದಾರೆ. ಆರ್ ಸಿಬಿಯ ಪ್ರಮುಖ ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಮತ್ತು ರೀಸ್ ಟೋಪ್ಲೆ ಈಗಾಗಲೇ ಇಂಗ್ಲೆಂಡ್‌ಗೆ ತೆರಳಿದ್ದರೆ, ಅತ್ತ ಸಿಎಸ್‌ಕೆ ತಂಡದಲ್ಲಿ ಕೂಡ ಮೊಯೀನ್ ಅಲಿ ಅಲಭ್ಯರಾಗಿದ್ದಾರೆ.

ಆರ್‌ಸಿಬಿ ತಂಡದಲ್ಲಿ ವಿಲ್ ಜ್ಯಾಕ್ಸ್ ಬದಲಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಆಡುವುದು ಬಹುತೇಕ ಖಚಿತವಾಗಿದೆ. ಮ್ಯಾಕ್ಸ್‌ವೆಲ್‌ ಫಾರ್ಮ್‌ಗೆ ಮರಳಿದರೆ, ವಿಲ್ ಜ್ಯಾಕ್ಸ್ ಅವರ ಅನುಪಸ್ಥಿತಿ ತಂಡವನ್ನು ಅಷ್ಟಾಗಿ ಕಾಡುವುದಿಲ್ಲ.

ಸಿಎಸ್‌ಕೆ ತಂಡದಲ್ಲಿ ಪ್ರಮುಖ ಆಟಗಾರರು ಇಲ್ಲದೇ ಇರುವುದು ಬಹು ದೊಡ್ಡ ಹಿನ್ನಡೆಯಾಗಿದೆ. ಮತೀಶ ಪತಿರಾನ, ಮುಸ್ತಾಫಿಜುರ್ ರಹಮಾನ್, ಮೊಯೀನ್ ಅಲಿ, ದೀಪಕ್ ಚಾಹರ್ ಅಲಭ್ಯರಾಗಿದ್ದಾರೆ.

ಮೇ 18ರಂದು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್‌ಕೆ ಪ್ಲೇ ಆಫ್ ತಲುಪಲಿದೆ. ಆದ್ದರಿಂದ ಆರ್ ಸಿಬಿ ಅಭಿಮಾನಿಗಳು ಮಳೆರಾಯನಿಗೆ ಪಂದ್ಯ ಮುಗಿಯುವವರೆಗೆ ಕರುಣೆ ತೋರುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ.

ಉಭಯ ತಂಡಗಳ ಸಂಭಾವ್ಯ ಆಡುವ ಬಳಗ

ಆರ್‌ಸಿಬಿ : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಟಿದಾರ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೋಮ್ರೋರ್, ದಿನೇಶ್ ಕಾರ್ತಿಕ್, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯುಸನ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

ಸಿಎಸ್‌ಕೆ: ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಿಮರ್ಜಿತ್ ಸಿಂಗ್, ಮಹೀಷ ತೀಕ್ಷಣ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ