ಹುಬ್ಬಳ್ಳಿ: ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆಯಾಯಿತು. ಮಳೆಯಿಂದ ಉಂಟಾದ ತಂಪಾದ ವಾತಾವರಣ ಜನರಿಗೆ ಖುಷಿ ಕೊಟ್ಟಿತು.
ಧಾರವಾಡ ನಗರ ಸೇರಿ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್, ಬ್ಯಾಹಟ್ಟಿ ಸೇರಿ ವಿವಿಧ ಗ್ರಾಮಗಳಲ್ಲಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ.
ಮಳೆಯಿಂದ ಹುಬ್ಬಳ್ಳಿಯ ಸ್ಟೇಷನ್ ರಸ್ತೆ, ಕೊಯಿನ್ ರಸ್ತೆ ಜಲಾವೃತಗೊಂಡಿತು. ಜನರು ಅದರಲ್ಲೇ ಪ್ರಯಾಸಪಟ್ಟು ಸಾಗಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕಾರವಾರ, ಅಂಕೋಲಾ, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಕುಮಟಾ ಭಾಗದಲ್ಲಿ ಗುಡುಗು ಸಹಿತ ಮಳೆಯಾಯಿತು. ಮೂರು ದಿನಗಳಿಂದ ಮೋಡದ ವಾತಾವರಣವಿತ್ತು. ಈ ಮಳೆಯಿಂದ ತೋಟ ಸಾಲು, ಬಾಳೆ ಮತ್ತು ಹೊಲಗಳಲ್ಲಿ ಅಲ್ಲಲ್ಲಿ ಮಳೆ ನೀರು ಸಂಗ್ರಹವಾಗಿತ್ತು.
ಶಿರಸಿ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಅರ್ಧ ಗಂಟೆ ಗುಡುಗು, ಮಿಂಚಿನೊಂದಿಗೆ ಬಿರುಸಿನ ಮಳೆ ಸುರಿಯಿತು. ನಗರದ ಸಹ್ಯಾದ್ರಿ ಕಾಲೊನಿಯಲ್ಲಿ 5ಕ್ಕೂ ಹೆಚ್ಚು ಮರಗಳು ಬುಡ ಸಮೇತ ಧರೆಗೆ ಉರುಳಿದವು.ಘಟ್ಟದ ಕೆಳಗಿನ ತಾಲ್ಲೂಕಾದ ಅಂಕೋಲಾದಲ್ಲಿಯೂ ಹದವಾಗಿ ಮಳೆ ಸುರಿದಿದೆ.
Laxmi News 24×7