Breaking News

ಬರಪೀಡಿತ ಪ್ರದೇಶ ಘೋಷಣೆಗೆ ಮನವಿ’

Spread the love

ಮೂಡಲಗಿ: ಮೂಡಲಗಿ ತಾಲ್ಲೂಕಿನ ಹೊಸಯರಗುದ್ರಿ ಗ್ರಾಮವನ್ನು ‘ಬರಪೀಡಿತ ಪ್ರದೇಶ’ ಎಂದು ಸರ್ಕಾರವು ಘೋಷಿಸಬೇಕು ಎಂದು ರೈತರು ಮಂಗಳವಾರ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ರಾಜ್ಯದ ಹಲವು ತಾಲ್ಲೂಕುಗಳ ಗ್ರಾಮಗಳ ರೈತರಿಗೆ ಬರಪೀಡಿತ ಪ್ರದೇಶವೆಂದು ಘೋಷಿಸಿ ಬರಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡಿದೆ.ಮೂಡಲಗಿ | 'ಬರಪೀಡಿತ ಪ್ರದೇಶ ಘೋಷಣೆಗೆ ಮನವಿ'

ಆದರೆ ಮೂಡಲಗಿ ತಾಲ್ಲೂಕಿನಲ್ಲಿ ಬರಗಾಲ ಇದ್ದರೂ ಕೇವಲ 13 ಗ್ರಾಮಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದೆ. ಹೊಸಯರಗುದ್ರಿ ಬರಗಾಲ ತಾಂಡವಾಡುತ್ತಿದ್ದರೂ ಬರಪಿಡಿತ ಎಂದು ಗುರುತಿಸಿಲ್ಲ. ಬರಪೀಡಿತ ಬಗ್ಗೆ ಸಮೀಕ್ಷೆ ಮಾಡಿ ಖಚಿತ ಪಡಿಸಿಕೊಂಡು ಹೊಸಯರಗುದ್ರಿ ಗ್ರಾಮವನ್ನು ಬರಪೀಡಿತ ಗ್ರಾಮವೆಂದು ಘೋಷಿಸಬೇಕು. ಬರಗಾಲದಿಂದ ನಷ್ಟವಾದ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ವೆಂಕಪ್ಪ ನಾಯಿಕ, ನಿಂಗಪ್ಪ ಮಜ್ಜಗಿ, ಸುರೇಶ ನಾಯಕ, ಶಿವನಗೌಡ ಪಾಟೀಲ, ಬಸಪ್ಪ ಪಾಟೀಲ, ಅಡಿವೆಪ್ಪ ಮಿರ್ಜಿ, ತಿಮ್ಮನ ಮಜ್ಜಗಿ, ಪ್ರಮೋದ ಚನ್ನಾಳ, ಸುರೇಶ ಗೂಮ್ಮಡಿ, ಸಚಿನ ಮಾಳೇದ, ಸತ್ತೆಪ್ಪ ಹೂಗಾರ ಸೇರಿದಂತೆ ಅನೇಕರು ಇದ್ದರು.


Spread the love

About Laxminews 24x7

Check Also

ಗೌರಿ ಹುಣ್ಣಿಮೆಯಿಂದ ಛಟ್ಟಿ ಅಮವಾಸ್ಯೆವರೆಗೆ ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್​ ವ್ಯವಸ್ಥೆ

Spread the love ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ರೇಣುಕಾ ಯಲ್ಲಮ್ಮದೇವಿ ದರ್ಶನ ತೆರಳುವ ಭಕ್ತಾದಿಗಳು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ