Breaking News

ಜೆಡಿಎಸ್ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಆದರೆ ಯಾರಿಂದಲೂ ಅದು ಸಾಧ್ಯವಿಲ್ಲ : ಶಾಸಕ ಎ.ಮಂಜು ಹೇಳಿಕೆ

Spread the love

ಮೈಸೂರು : ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ನವೀನ್ ಗೌಡ ಫೇಸ್ಬುಕ್ನಲ್ಲಿ ಪೆನ್ ಡ್ರೈವ್ ಅನ್ನು ಅರಕಲಗೂಡು ಶಾಸಕ ಎ ಮಂಜು ಅವರಿಗೆ ನೀಡಿದ್ದೇನೆ ಎಂದು ಪೋಸ್ಟ್ ಹಾಕಿದ್ದು, ಈ ಕುಡಿದಂತೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಶಾಸಕ ಎ ಮಂಜು ನನಗೆ ಮಾಹಿತಿ ಇರೋ ಪ್ರಕಾರ ಈ ಪ್ರಕಾರಣ ಇಟ್ಟುಕೊಂಡು ಜೆಡಿಎಸ್ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಆದರೆ ಯಾರಿಂದಲೂ ಅದು ಸಾಧ್ಯವಿಲ್ಲ ಎಂದು ತಿಳಿದರು.

ಜೆಡಿಎಸ್ ಮುಗಿಸಲು ಷಡ್ಯಂತ್ರ ನಡೆಯುತ್ತಿದೆ ಆದರೆ ಯಾರಿಂದಲೂ ಅದು ಸಾಧ್ಯವಿಲ್ಲ : ಶಾಸಕ ಎ.ಮಂಜು ಹೇಳಿಕೆ

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನವೀನ ಗೌಡ ಯಾರು ಅಂತಾನೆ ನನಗೆ ಗೊತ್ತಿಲ್ಲ. ಹಾಗಾಗಿ ಎಸ್‌ಐಟಿ ಅಧಿಕಾರಿಗಳು ಮೊದಲು ನವೀನ್ ಗೌಡನನ್ನು ಬಂಧಿಸಬೇಕು ಎಂದು ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಮಂಜು ಹೇಳಿಕೆ ನೀಡಿದರು.

ರಸ್ತೆಗಳು, ಪಾರ್ಕ್, ಅಂಗಡಿ ಮುಂಗಟ್ಟು ಮುಂದೆ ಪೆನ್ ಡ್ರೈವ್ ಎಸೆದಿದ್ದರು.ಊರಿಗೆಲ್ಲ ಹಂಚಿದ ಮೇಲೆ ನನಗೆ ಕೊಟ್ಟೆ ಎಂದು ಹೇಳಿದ್ದೇನೆ. ನಾನು ಎಚ್ ಡಿ ದೇವೇಗೌಡ ಕುಟುಂಬಕ್ಕೆ ಹತ್ತಿರವಾದ ಮೇಲೆ ಆರೋಪ ಮಾಡಲಾಗುತ್ತಿದೆ. ಮಾರುತಿ ಕಲ್ಯಾಣ ಮಂಟಪಕ್ಕೆ ನಾನು ಮದುವೆಗೆ ಹೋಗಿದ್ದಂತೂ ನಿಜ ಎಚ್ ಡಿ ರೇವಣ್ಣ ಅವರ ಬಂಧನ ಖಂಡಿಸಿ ನಾವು ಮೊದಲ ಬಾರಿಗೆ ಪ್ರತಿಭಟನೆ ಮಾಡಿದ್ದೆವು ಅದಾದ ಮೇಲೆ ಅಪಪ್ರಚಾರ ಮಾಡಲಾಗಿದೆ ಎಂದರು.

ನನಗೆ ಕೊಟ್ಟಿದ್ದೇನೆ ಅಂದಮೇಲೆ ಬೇರೆಯವರಿಗೂ ಅವನೇ ಹಂಚಿರುತ್ತಾನೆ, ಕೂಡಲೇ ಎಸ್‌ಐಟಿ ಅಧಿಕಾರಿಗಳು ನವೀನ್ ಗೌಡನನ್ನು ಬಂಧಿಸಬೇಕು ನನಗೆ ಮಾಹಿತಿ ಇರುವ ಪ್ರಕಾರ ಜೆಡಿಎಸ್ ಮುಗಿಸಲು ಷಡ್ಯಂತರ ನಡೆಯುತ್ತಿದೆ ಆದರೆ ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ನಾನು ಎಲ್ಲಾ ಪಕ್ಷಗಳನ್ನು ನೋಡಿದ್ದೇನೆ ಪ್ರಸ್ತುತ ಜನತಾದಳದಲ್ಲಿದ್ದೇನೆ ಕಷ್ಟಕಾಲದಲ್ಲಿ ಎಚ್ ಡಿ ದೇವೇಗೌಡರ ಕುಟುಂಬದ ಜೊತೆಗೆ ನಿಲ್ಲುತ್ತೇನೆ ಎಂದು ಮೈಸೂರಿನಲ್ಲಿ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ ಮಂಜು ಹೇಳಿಕೆ ನೀಡಿದರು.


Spread the love

About Laxminews 24x7

Check Also

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಿರಂತರ: ಮಾತಾ ಗಂಗಾದೇವಿ

Spread the love ದಾವಣಗೆರೆ: ನಮ್ಮ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ನಿರಂತರವಾಗಿ ಇದ್ದೇ ಇರುತ್ತದೆ ಎಂದು ಬಸವ ಧರ್ಮ ಪೀಠದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ