Breaking News

ನಗರದಲ್ಲಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದವರ ಸಂಖ್ಯೆ 30 ಲಕ್ಷಕ್ಕೆ ಏರಿಕೆ

Spread the love

ಬೆಂಗಳೂರಿನಲ್ಲಿ ಟ್ರಾಫಿಕ್‌ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆ ಆಗಿದೆ. ಬೆಂಗಳೂರಿನಲ್ಲಿ 2024ರ ಏಪ್ರಿಲ್‌ ವರೆಗೆ 30,61,524 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ದ್ವಿಚಕ್ರ ವಾಹನಗಳ ನಿಯಮ ಉಲ್ಲಂಘನೆ ಸಂಖ್ಯೆಯೇ ಶೇಕಡಾ 86.89 ರಷ್ಟಾಗಿದೆ.

Bengalru: ನಗರದಲ್ಲಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದವರ ಸಂಖ್ಯೆ 30 ಲಕ್ಷಕ್ಕೆ ಏರಿಕೆ

ಟ್ರಾಫಿಕ್‌ ರೂಲ್ಸ್‌ ಬ್ರೇಕ್‌ ಮಾಡಿದ ವಾಹನಗಳ ಸಂಖ್ಯೆಯಲ್ಲಿ ಆಟೋ ಸಂಖ್ಯೆ 5971 ಆಗಿದ್ದು, ಕಾರುಗಳ ನಿಯಮ ಉಲ್ಲಂಘನೆ ಮಾಡಿದ ಸಂಖ್ಯೆ 3,67,006 ಆಗಿದೆ. 4405 ಗೂಡ್ಸ್‌ ಗಾಡಿಗಳ ಮೇಲೆ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದ್ದು, 14,319 ಬಸ್‌ಗಳು, 9,584 ಟೆಂಪೋಗಳು ನಿಯಮ ಉಲ್ಲಂಘನೆ ಮಾಡಿವೆ.

ಇನ್ನು ಒಟ್ಟಾರೆ ನಿಯಮ ಉಲ್ಲಂಘನೆಯಲ್ಲಿ ಬಸ್ ಶೇಕಡಾವಾರು ಸಂಖ್ಯೆ 0.47 ಆಗಿದೆ. ಒಟ್ಟಾರೆ ದಾಖಲಾದ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಅಟೋ 0.20, ಗೂಡ್ಸ್‌ ಗಾಡಿ 0.14, ಕಾರ್‌ 11.99, ಟೆಂಪೋಗಳ ಮೇಲೆ 0.31 ಕೇಸ್ ದಾಖಲಾಗಿವೆ.


Spread the love

About Laxminews 24x7

Check Also

ಏರ್​ಗನ್​ನಿಂದ ಹಾರಿದ ಗುಂಡು: ಶಿರಸಿಯಲ್ಲಿ 9 ವರ್ಷದ ಬಾಲಕ ಸಾವು

Spread the love ಶಿರಸಿ(ಉತ್ತರಕನ್ನಡ): ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಬಾಲಕನ ಕೈಯ್ಯಿಂದ ಏರ್​ಗನ್​ ಗುಂಡು ಹಾರಿ ಇನ್ನೊಂದು ಬಾಲಕ ಮೃತಪಟ್ಟ ಹೃದಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ