ಬೆಂಗಳೂರು,:- ಸಿನಿಮೀಯ ರೀತಿಯಲ್ಲಿ ದರೋಡೆ ನಡೆಸುತ್ತಿದ್ದ ಆರು ಮಂದಿಯನ್ನು ಭಾರತೀನಗರ ಪೊಲೀಸರು ಬಂಧಿಸಿ 5.83 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಸಾಹೀಲ್ ಅಹಮ್ಮದ್(25), ಸಯ್ಯದ್ ಸುಹೇಲ್(25), ಸಯ್ಯದ್ ಜವಾದ್(20), ಮಹಮದ್ ಸಾಲ್ಹೆ ಅಲಿ ಅಪೀಸ್(20), ಮಹಮದ್ ಶಾಬಾಜ್(24) ಮತ್ತು ಸಯ್ಯದ್ ರವೂಪ್(19) ಬಂಧಿತರು.
ಆರೋಪಿಗಳು ಎಕೆಝೆಡ್ ಸೀಫುಡ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ರಾತ್ರಿ ವೇಳೆ ಸಂಚು ರೂಪಿಸಿ ದರೋಡೆ ನಡೆಸಿ, ನಂತರ ಅವರೇ ಠಾಣೆಗೆ ಬಂದು ದೂರು ನೀಡುತ್ತಿದ್ದರು ನವೆಂಬರ್ 9 ರಂದು ಮಧ್ಯರಾತ್ರಿ 12.15ರ ಸುಮಾರಿನಲ್ಲಿ ಎಕೆಝಡ್ ಸೀಫುಡ್ ಅಂಗಡಿಯವರ ಬಳಿ ಈ ಆರೋಪಿಗಳು ಸಿನಿಮೀಯ ರೀತಿ ದರೋಡೆ ನಡೆಸಿದ್ದು, ಈ ಸಂಬಂಧ ಭಾರತೀನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಲೆಗೆ ಬೀಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಬಂಧಿತನಾಗಿರುವ ಆರೋಪಿ ಮಹಮದ್ ಸಾಲ್ಹೆ ಭಾರತೀನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
Laxmi News 24×7