Breaking News
Bengaluru: NSUI members hold a poster of JD(S) MP Prajwal Revanna during a protest against his involvement in the alleged sexual abuse case, in Bengaluru, Tuesday, April 30, 2024. (PTI Photo/Shailendra Bhojak)(PTI04_30_2024_000080A)

8 ಸಂತ್ರಸ್ತೆಯರನ್ನು ಸಂಪರ್ಕಿಸಿದ ಎಸ್‌ಐಟಿ? ಇನ್ನಷ್ಟು ಎಫ್‌ಐಆರ್‌ ಸಾಧ್ಯತೆ

Spread the love

ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣ ಕಾವೇರುತ್ತಿರುವ ಹಿನ್ನೆಲೆ ಯಲ್ಲಿ ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಸಂತ್ರಸ್ತೆಯರ ಪತ್ತೆಗೆ ಎಸ್‌ಐಟಿ ಮುಂದಾಗಿದೆ.

ಎಸ್‌ಐಟಿ ಅಧಿಕಾರಿಗಳು 8 ಸಂತ್ರಸ್ತೆಯರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.ಈ ಪೈಕಿ ಮೂವರು ಸಂತ್ರಸ್ತೆಯರು ತಮಗಾದ ಅನ್ಯಾಯದ ವಿರುದ್ಧ ದೂರು ನೀಡುವ ಚಿಂತನೆಯಲ್ಲಿದ್ದಾರೆ. ಆದರೆ ಇನ್ನೂ ದೂರು ನೀಡಿಲ್ಲ. ಕೆಲವು ಸಂತ್ರಸ್ತೆಯರಿಂದ ಗೌಪ್ಯವಾಗಿ ಹೇಳಿಕೆ ದಾಖಲಿಸಲು ಎಸ್‌ಐಟಿ ಮುಂದಾಗಿದ್ದು, ಇನ್ನಷ್ಟು ಎಫ್‌ಐಆರ್‌ ದಾಖಲಾಗುವ ಸಾಧ್ಯತೆಗಳಿವೆ.

 

ವೀಡಿಯೋದಲ್ಲಿ ಇದ್ದಾರೆ ಎನ್ನಲಾದ 5ಕ್ಕೂ ಹೆಚ್ಚು ಸರಕಾರಿ ಮಹಿಳಾ ನೌಕರರಿಗೆ ನೋಟಿಸ್‌ ನೀಡಲಾಗಿದೆ.

ಒಂದು ವೇಳೆ ವೀಡಿಯೋ ದಲ್ಲಿರುವುದು ಇವರೇ ಎಂದು ಸಾಬೀತಾದರೆ ಅವರವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಈ ಪೈಕಿ ಕೆಲವರು ವೀಡಿಯೋದಲ್ಲಿರುವುದು ನಾವಲ್ಲ ಎಂದಿದ್ದಾರೆ ಎನ್ನಲಾಗಿದೆ. ಎಸ್‌ಐಟಿ ವಶದಲ್ಲಿದ್ದಾರೆ ಎನ್ನಲಾದ ಸಂತ್ರಸ್ತೆಯರಿಗೆ ಅಭದ್ರತೆ ಕಾಡಿದರೆ ಮಹಿಳಾ ಪೊಲೀಸರನ್ನು ಭದ್ರತೆಗೆ ನಿಯೋಜಿಸಲು ಎಸ್‌ಐಟಿ ಸಿದ್ಧವಿದೆ ಎಂದು ಸಂಪರ್ಕ ದಲ್ಲಿರುವ ಸಂತ್ರಸ್ತೆಯರಿಗೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

6360938947 ಸಂತ್ರಸ್ತೆಯರಿಗೆ ಎಸ್‌ಐಟಿ ಹೆಲ್ಪ್ ಲೈನ್‌ ಆರಂಭ
ಬೆಂಗಳೂರು: ಅಶ್ಲೀಲ ವೀಡಿಯೋಗಳಲ್ಲಿ ಇದ್ದಾರೆ ಎನ್ನಲಾದ ಸಂತ್ರಸ್ತೆಯರು ಹಾಗೂ ಬಾತ್ಮೀದಾರರ ನೆರವಿಗಾಗಿ ಎಸ್‌ಐಟಿ ಸಹಾಯವಾಣಿ 6360938947 ತೆರೆದಿದ್ದು, ಸಂತ್ರಸ್ತೆಯರು ತಮಗಾದ ಅನ್ಯಾಯದ ಬಗ್ಗೆ ಹೇಳಿಕೊಂಡರೆ ಅವರ ಮಾಹಿತಿಯನ್ನು ಗೌಪ್ಯ ವಾಗಿಡುವುದಾಗಿ ತಿಳಿಸಿದೆ. ಜತೆಗೆ ಕಾನೂನಿನ ನೆರವು ಮತ್ತು ರಕ್ಷಣೆಯನ್ನೂ ನೀಡುವುದಾಗಿ ಪತ್ರಿಕಾ ಪ್ರಕಟನೆಯಲ್ಲಿ ಎಸ್‌ಐಟಿ ಹೇಳಿದೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ