Breaking News

ಅಹವಾಲು ನೀಡಲು ಹೋದ ಸಂತ್ರಸ್ಥೆಗೆ ಗನ್ ತೋರಿಸಿ ಅತ್ಯಾಚಾರ..! ಮತ್ತೊಂದು ನೀಚ ಕೃತ್ಯ ಬಯಲು

Spread the love

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡೀಯೋಗಳ ಪೆನ್ ಡ್ರೈವ್ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ. ಇದೀಗ ಮತ್ತೆರಡು ಪ್ರಕರಣಗಳು ದಾಖಲಾಗಿದ್ದು ರೇವಣ್ಣ ಕುಟುಂಬಕ್ಕೆ ಪೆನ್ ಡ್ರೈವ್ ಉರುಳು ದಿನೇ ದಿನೇ ಬಿಗಿಯಾಗ್ತಿದೆ. ಪೆನ್ಡ್ರೈವ್ ಪ್ರಕರಣದ ದಿನ ಕಂಪ್ಲೀಟ್ ಡಿಟೇಲ್ಸ್ ತೋರಿಸ್ತೀವಿ ನೋಡಿ ..ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ವಿರುದ್ದ ತನಿಖೆ ಕೈಗೊಂಡಿರೋ ಎಸ್‌ಐಟಿ ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದ ಎಸ್‌ಐಟಿ ತಂದೆ ಮಗನಿಗೆ ವಿಚಾರಣೆಗೆ ಹಾಜರಾಗುವಂತೆ ಇಂದು ಮೂರನೇ ನೋಟಿಸ್ ಜಾರಿ ಮಾಡಿದೆ. ಇದ್ರ ನಡುವೆ ಹೊಳೆನರಸೀಪುರದಲ್ಲಿ ದಾಖಲಾಗಿರೋ ಪ್ರಕರಣದಲ್ಲಿ ನಾನ್ ಬೇಲೆಬಲ್ ಸೆಕ್ಷನ್ ಗಳಿಲ್ಲ ಅನ್ನೋ ಕಾರಣಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್ಸು ಪಡೆದಿದ್ರು. ಮತ್ತೊಂದೆಡೆ ಸಿಐಡಿಯಲ್ಲಿ ದಾಖಲಾಗಿರೋ ಎರಡನೇ ಎಫ್‌ಐಆರ್ ನಲ್ಲಿ ಸಂಸದ ಪ್ರಜ್ವಲ್

ರೇವಣ್ಣ ಎಸಗಿರೋ ನೀಚ ಕೃತ್ಯದ ಬಗ್ಗೆ ಸಂತ್ರಸ್ಥೆ ಗಂಭೀರ ಆರೋಪ ಮಾಡಿದ್ದಾಳೆ. ಕ್ಷೇತ್ರದ ಅಭಿವೃದ್ದಿ ಕೆಲಸಗಳ ಬಗ್ಗೆ ಅಹವಾಲು ಸಲ್ಲಿಸಲು ಹೋದಾಗ ಅವ್ರ ಗೆಸ್ಟ್ ಹೌಸ್ ನಲ್ಲಿ ನನಗೆ ಗನ್ ತೋರಿಸಿ ಬೆದರಿಕೆ ಹಾಕಿದ್ರು. ಬಳಿಕ ತನ್ನ ಪತಿಯನ್ನ ಕೊಲೆ‌ ಮಾಡೋದಾಗಿ ಬೆದರಿಕೆ ಹಾಕಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ.

 

ಅಷ್ಟೇ ಅಲ್ಲದೆ ಅತ್ಯಾಚಾರದ ದೃಶ್ಯಗಳನ್ನ ಮೊಬೈಲ್ ನಲ್ಲಿ‌ ಸೆರೆ ಹಿಡಿದು , ಬ್ಲಾಕ್ ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾರೆ. ಜೊತೆಗೆ ವಿಡಿಯೋ ಕಾಲ್ ಮಾಡಿ ನಗ್ನವಾಗುವಂತೆ ಬೆದರಿಕೆ ಹಾಕುತ್ತಿದ್ರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಆ ಹಿನ್ನೆಲೆ ಇಂದು ಬೆಳ್ಳಬೆಳಗ್ಗೆ ಹಾಸನದ ಎಂಪಿ ಗೆಸ್ಟ್ ಹೌಸ್, ಬೆಂಗಳೂರಿನ ಬಸವನಗುಡಿಯಲ್ಲಿರುವ ಮನೆ,ಹೊಳೆನರಸೀಪುರದ ಪಡುವಲಹಿಪ್ಪೆಯ ಫಾರ್ಮ್ ಹೌಸ್,ಸೂರಜ್ ರೇವಣ್ಣ ಗೆ ಸೇರಿದ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಮಹತ್ವದ ಸಾಕ್ಷಿ ಕಲೆ ಹಾಕಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಸಂತ್ರಸ್ತೆಯನ್ನು ಕಿಡ್ನಾಪ್ ಮಾಡಿರುವ ಬಗ್ಗೆ ಮೈಸೂರಿನ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸಂತ್ರಸ್ತ ಮಹಿಳಯನ್ನು ಕಿಡ್ನ್ಯಾಪ್ ಮಾಡಿ ಆಮಿಷವೊಡ್ಡಿ, ಕೇಸ್ ಮುಚ್ಚಿಹಾಲು ಪ್ಲ್ಯಾನ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಕೆ.ಆರ್. ನಗರ ಠಾಣೆಗೆ ಸಂತ್ರಸ್ತೆ ಪುತ್ರ ದೂರಿನ ಮೇರೆಗೆ ಪ್ರಜ್ವಲ್ ತಂದೆ, ಹೆಚ್.ಡಿ.ರೇವಣ್ಣ, ಸಂಬಂಧಿ ಸತೀಶ್ ಬಾಬು ವಿರುದ್ಧ ತಡರಾತ್ರಿ ಎಫ್‌ಐಆರ್ ದಾಖಲಾಗಿದೆ.

ದೂರು ನೀಡುತ್ತಿದ್ದಂತೆ ಎಎಸ್ ಪಿ ನಂದಿನಿ ಕೆ ಆರ್ ನಗರ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.. ಪೆನ್ ಡ್ರೈವ್ ವಿವಾದದಲ್ಲಿ ತನ್ನ ತಾಯಿಯ ಚಿತ್ರವೂ ಇದ್ದು ವಿಡಿಯೋ ಬಹಿರಂಗದ ಬಳಿಕ ಸತೀಶ್ ಬಾಬು ನಮ್ಮ ಮನೆಗೆ ಬಂದು , ರೇವಣ್ಣ ಕರೆಯುತ್ತಿದ್ದಾರೆ ಎಂದು ನಮ್ಮ ತಾಯಿಯನ್ನು ಕರೆದುಕೊಂಡು ಹೋದರು ಆಗಿನಿಂದ ನನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಿಕೆದ್ದಾರೆ..

ಈ ಎಲ್ಲಾ ಬೆಳವಣಿಗೆಗೆಗಳ ಮಧ್ಯೆ ಎಸ್‌ಐಟಿ ಮುಂದೆ ವಕೀಲ ದೇವರಾಜೇಗೌಡ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಹತ್ವದ ದಾಖಲೆಗಳನ್ನ ನೀಡಿದ್ದು, ಮಹಿಳೆಯರ ಮಾನ ಹರಾಜು ಮಾಡಿರುವ ಕಿಡಿಗೇಡಿಗಳ ವಿರುದ್ದ ಕ್ರಮಜರುಗಿಸುವಂತೆ ಮನವಿ‌ಮಾಡಿದ್ದಾರೆ. ಇನ್ನೊಂದೆಡೆ ಪ್ರಜ್ವಲ್ ರೇವಣ್ಣ ಸಹ ಇನ್ನು ವಿಚಾರಣೆಗೆ ಹಾಜರಾಗದ ಹಿನ್ನೆಲೆ ಮುಂದೆ ಯಾವ ರೀತಿ ಕ್ರಮಕ್ಕೆ ಮುಂದಾಗಬೇಕು ಎಂದು ಎಸ್‌ಐಟಿ ತಂಡ ಚಿಂತನೆ ನಡೆಸ್ತಿದೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ