Breaking News

ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಕಾಲಿಗೆ ಗುಂಡು

Spread the love

ಹುಬ್ಬಳ್ಳಿ: ಬಾಲಕಿ ಮೇಲೆ ಅತ್ಯಾಚಾರವೆಸಗಿ ಮಾಡಿ ಗರ್ಭಿಣಿಯಾಗಲು ಕಾರಣನಾದ ಆರೋಪದ ಮೇಲೆ ಪೊಲೀಸ್ ವಶದಲ್ಲಿದ್ದ ಆರೋಪಿಯೊಬ್ಬ ಶುಕ್ರವಾರ ತಡರಾತ್ರಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ.

ಸದ್ದಾಂ ಹುಸೇನ್ ಎಂಬಾತನೇ ಆರೋಪಿ.’ಬಾಲಕಿ‌ ಜೊತೆ ಸ್ನೇಹ ಬೆಳೆಸಿದ ಆರೋಪಿ ಪ್ರೀತಿಸುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದ. ವಾಂತಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಅವಳನ್ನು ಕಿಮ್ಸ್‌ಗೆ ದಾಖಲಿಸಿದಾಗ, ಗರ್ಭಧರಿಸಿರುವುದು ಗಮನಕ್ಕೆ ಬಂದಿತ್ತು. ವಿಷಯ ತಿಳಿದ ಆರೋಪಿ ಬಾಲಕಿಗೆ ಕರೆ ಮಾಡಿ ಪೊಲೀಸರಿಗೆ ತಿಳಿಸಿದರೆ ಜೀವತೆಗೆಯುವುದಾಗಿ ಬೆದರಿಸಿದ್ದ’ ಎಂದು ಬಾಲಕಿ ಪೋಷಕರು ಶುಕ್ರವಾರ ನವನಗರ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿದ್ದರು.

ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ತಕ್ಷಣ ವಶಕ್ಕೆ ಪಡೆದಿದ್ದರು. ಬಂಧನ ಪ್ರಕ್ರಿಯೆಗೆ ರಾತ್ರಿ ಸುತಗಟ್ಟಿ ಗ್ರಾಮಕ್ಕೆ ತೆರಳಿದಾಗ, ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆ ವೇಳೆ ಪೊಲೀಸರು ಅವನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ. ಅವನಿಗೆ ಧಾರವಾಡ ಸಿವಿಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಕಿಮ್ಸ್‌ಗೆ ರವಾನಿಸಲಾಗಿದೆ.

 

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್, ‘ಆರೋಪಿಯನ್ನು ಸುತಗಟ್ಟಿ ಗ್ರಾಮದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಬಂಧನ ಪ್ರಕ್ರಿಯೆಯಲ್ಲಿ ಆರೋಪಿಯ ಬೆರಳಚ್ಚು, ಓಡಾಡಿದ ಜಾಗ, ವೈದ್ಯಕೀಯ ಪರೀಕ್ಷೆ ಹಾಗೂ ಇತರ ಮಾಹಿತಿಗಳನ್ನು ಸಂಗ್ರಹಿಸಬೇಕಾಗುತ್ತದೆ.‌ ಈ ಪ್ರಕ್ರಿಯೆಗೆ ಪೊಲೀಸರು ರಾತ್ರಿ 12.10ಕ್ಕೆ ಸುತಗಟ್ಟಿ ಗ್ರಾಮಕ್ಕೆ ತೆರಳಿದಾಗ ಅವನು ಪೊಲೀಸರಿಗೆ ಬಟನ್ ಚಾಕು ತೋರಿಸಿ, ಹಲ್ಲೆ ನಡೆಸಿದ್ದಾನೆ. ವಿದ್ಯಾಗಿರಿ ಪೊಲೀಸ್ ಠಾಣೆ ಸಿಬ್ಬಂದಿ ಅರುಣ್ ಹಾಗೂ ಇನ್‌ಸ್ಪೆಕ್ಟರ್ ಅವರ ಕಾಲಿಗೆ ಗಾಯವಾಗಿದೆ‌. ತಕ್ಷಣ ಇನ್‌ಸ್ಪೆಕ್ಟರ್ ಸಂಗಮೇಶ ಡಿಂಗಿನಾಳ ಆತ್ಮರಕ್ಷಣೆಗಾಗಿ ಗಾಳಿಯಲ್ಲಿ ಒಂದು ಗುಂಡು ಹಾರಿಸಿ, ಮತ್ತೊಂದು ಗುಂಡನ್ನು ಆರೋಪಿಯ ಎಡಗಾಲಿಗೆ ಹೊಡೆದಿದ್ದಾರೆ’ ಎಂದರು.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ