Breaking News

ನೇಹಾ ಹಾಗೂ ಫಯಾಜ್ ಪ್ರೀತಿ ಮಾಡಿದ್ದು ಸತ್ಯ.! ಸಚಿವ ಆರ್.ಬಿ. ತಿಮ್ಮಾಪುರ

Spread the love

ಬಾಗಲಕೋಟೆ: ನೇಹಾ ಹಿರೇಮಠ ಹತ್ಯೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ಸದ್ಯ ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಗಲಕೋಟೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದ್ದು, ಇದೇ ರೀತಿ ನಮ್ಮ ಸಹೋದರಿಗೆ ಆದ್ರೆ ನಾವು ಸುಮ್ಮನಿರ್ತೀವಾ?

ಅವನು ಯಾವನೇ ಆಗಿರಲಿ ಶಿಕ್ಷೆಯಾಗಬೇಕು ಎಂದರು.

ಮಾತು ಮುಂದುವರಿಸಿದ ಸಚಿವರು, ನಮ್ಮ ನಾಡಿನಲ್ಲಿ ಕಾನೂನಿದೆ. ಇವರು ಅಧಿಕಾರದಲ್ಲಿ ಇದ್ದಾಗ ಇಂತ ಎಷ್ಟೋ ಪ್ರಕರಣ ಆಗಿವೆ.
ಗುಜರಾತ್​ನಲ್ಲಿ ಒಂದೇ ದಿನ ಆರು ಘಟನೆ ಆಗಿದ್ದವು. ನಾವು ಹೇಳ್ತೇವೆ, ತಪ್ಪು ಮಾಡಿದ್ದು ಯಾರೇ ಆಗಲಿ, ಯಾವನೇ ಇರಲಿ ಶಿಕ್ಷೆ ಆಗಬೇಕು.ನೇಹಾ ಹಾಗೂ ಫಯಾಜ್ ಪ್ರೀತಿ ಮಾಡಿದ್ದು ಸತ್ಯ.! ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಿಷ್ಟು
ಇವತ್ತು ಮುಸ್ಲಿಂ ಸಂಘಟನೆಯವರು ಪ್ರತಿಭಟನೆ ಮಾಡ್ತಿದ್ದಾರೆ. ತಪ್ಪು ಮಾಡಿದ್ದು ಯಾವುನೇ ಇದ್ದರೂ ಶಿಕ್ಷೆ ಆಗಲೇಬೇಕು ಎಂದರು.

ಕೊರೊನಾದಲ್ಲಿ ಸತ್ತಾಗ ಮುಸ್ಲಿಂ ಹುಡುಗರು ಶವ ಸಂಸ್ಕಾರ ಮಾಡಿದ್ದಾರೆ. ಇಂತಹ ಅನ್ಯೋನ್ಯ ಸಂಬಂಧ ಇರುವಾಗ, ಯಾವುನೋ ಒಬ್ಬ ಕಿಡಗೇಡಿ ತಪ್ಪು ಮಾಡಿದಾಗ ತಕ್ಕ ಶಿಕ್ಷೆ ಆಗಬೇಕು. ಅಧಿಕಾರದ ಲಾಲಸೆಗಾಗಿ ಕೋಮುವಾದದ ಚಾಲು ಮಾಡೋದು, ಇವರ ಎಲ್ಲ ಪ್ರತಿಭಟನೆಗಳು ಅಧಿಕಾರದ ಲಾಲಸೆಗಾಗಿ ಮಾತ್ರ. ಪ್ರಧಾನಿ ಮೋದಿಯವರೆ ಐಪಿಸಿ ಕೋಡ್ ತಿದ್ದುಪಡಿ ತನ್ನಿ. ಹೌದಪಾ, ನಿಮಗೆ ಹೆಣ್ಮಕ್ಕಳ ಬಗ್ಗೆ ಗೌರವವಿದೆ ಅಂತ ಹೇಳಬಹುದು. ಓಣಿಯಲ್ಲಿ ಚಿಲ್ಲರೆ ಜಗಳ ಹಚ್ಚುವರು ಕಾನೂನು ತರಬೇಕು. ಮಣಿಪುರದಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿದ್ರಲ್ಲ, ಆ ಮಣಿಪುರ ಘಟನೆ ಬಗ್ಗೆ ಪ್ರಧಾನಿ ಬಾಯಿ ಬಿಡ್ತಿಲ್ಲ ಏಕೆ? ಅವಳು ಹೆಣ್ಣು ಮಗಳು ಅಲ್ಲವೇನು? ಎಂದು ಹೇಳಿದರು.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ