Breaking News

ಬಾಡಿಗೆ ಮನೆ ಪ್ರವೇಶ ಮಾಡಿದ ಶೆಟ್ಟರ್

Spread the love

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮಾತು ಕೊಟ್ಟಂತೆ ಬೆಳಗಾವಿಯಲ್ಲಿ ಮನೆ ಮಾಡಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯ ಕುಮಾರಸ್ವಾಮಿ ಬಡಾವಣೆಯಲ್ಲಿ ಎರಡು ಮಹಡಿಯ ಮನೆಯನ್ನು ಬಾಡಿಗೆ ಪಡೆದಿರುವ ಜಗದೀಶ್ ಶೆಟ್ಟರ್ ಯುಗಾದಿ ಹಬ್ಬದ ದಿನವೇ ಗೃಹಪ್ರವೇಶ ಮಾಡಿದ್ದಾರೆ.

Belagavi: ಯುಗಾದಿ ದಿನ ಬಾಡಿಗೆ ಮನೆ ಪ್ರವೇಶ ಮಾಡಿದ ಶೆಟ್ಟರ್

ಹೊಸ ಮನೆಯಲ್ಲಿ ಜಗದೀಶ್ ಶೆಟ್ಟರ್ ಕುಟುಂಬದ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಜಗದೀಶ ಶೆಟ್ಟರ್ ಅವರ ಪತ್ನಿ ಶಿಲ್ಪಾ ಶೆಟ್ಟರ್, ಸಂಸದೆ ಮಂಗಲ ಅಂಗಡಿ, ಸೊಸೆ ಶೃದ್ಧಾ ಶೆಟ್ಟರ್, ಪುತ್ರ ಸಂಕಲ್ಪ, ಸ್ಫೂರ್ತಿ ಪಾಟೀಲ ಇದ್ದರು.

ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ವಿರೋಧಿಗಳಿಗೆ ಉತ್ತರ ಕೊಡಲು ಮನೆಮಾಡಿಲ್ಲ. ಚುನಾವಣೆಗೆ ಮೊದಲು ನಾನು ಹೇಳಿಕೆ ನೀಡಿದಂತೆ ಮನೆ ಮಾಡಿದ್ದೇನೆ ಎಂದರು.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ