Breaking News

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ ರೈತರು

Spread the love

ಬೆಳಗಾವಿ, ಮಾರ್ಚ್​ 2: ರಾಜ್ಯದಲ್ಲಿ ಲೋಕಸಭೆ ಚುನಾವಣೆ(Lok Sabha Elections)ಕಾವು ರಂಗೇರುತ್ತಿದೆ. ಇದೇ ವೇಳೆ ರೈತರ ಆಕ್ರೋಶ ಕೂಡ ಜೋರಾಗಿದೆ. ಸರ್ಕಾರ ಸೇರಿದಂತೆ ಅಧಿಕಾರಿಗಳು, ಜನಪ್ರತಿನಿಧಿಗಳು ಚುನಾವಣೆಯಲ್ಲಿ ಬಿಜಿ ಇದ್ದು ಜಾನುವಾರುಗಳಿಗೆ ಮೇವಿಲ್ಲ.

ನೀರಿಲ್ಲದೇ ಪರಿತಪ್ಪಿಸುತ್ತಿವೆ. ಬರ ಪರಿಹಾರವೂ ಇಲ್ಲ, ರೈತರ (Farmers) ಕಷ್ಟ ಹೇಳತಿರದ್ದಾಗಿದ್ದು ಇದರಿಂದ ಬೆಳಗಾವಿಯಲ್ಲಿ ರೈತರು ಇಂದು ಬೀದಿಗಿಳಿದಿದ್ದರು.

ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದು, ಕೊನೆ ಘಳಿಗೆಯಲ್ಲಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದ್ಯಾಕೆ? ರೈತರ ಬೇಡಿಕೆಗಳೇನೂ ಎಂಬ ಮಾಹಿತಿ ಇಲ್ಲಿದೆ.

ಬರ ಪರಿಹಾರ, ಸಾಲಮನ್ನಾಗೆ ಆಗ್ರಹ: ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿದ ರೈತರು

ಜಿಲ್ಲೆಯ ರೈತರು ಮತ್ತು ವಿವಿಧ ಮಠಾಧೀಶರು ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊರಾಟಕ್ಕಿಳಿದಿದ್ದರು. ಬರಗಾಲದ ಪರಿಹಾರ ನೀಡಬೇಕು,

ಸಾಲ ಮನ್ನಾ ಮಾಡಬೇಕು, ಘಟಪ್ರಭಾ ನದಿಯಿಂದ ಎಡ ಹಾಗೂ ಬಲದಂಡೆ ಕಾಲುವೆಗೆ ನೀರು ಹರಿಸಬೇಕು ಮುಖ್ಯವಾಗಿ ಜಾನುವಾರುಗಳಿಗೆ ನೀರು ಹಾಗೂ ಮೇವಿನ ವ್ಯವಸ್ಥೆ ಮಾಡಬೇಕು ಅಂತಾ ಒತ್ತಾಯಿಸಿ ಇಂದು ಹೋರಾಟ ಆರಂಭಿಸಿದ್ದರು.

ಬೆಳಗಾವಿಯ ಚನ್ನಮ್ಮ ವೃತ್ತದಿಂದ ಹೋರಾಟ ಶುರು ಮಾಡಿದ ರೈತರು ಡಿಸಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿದರು.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ