Breaking News

ದೊಡ್ಮನೆ ಮೊಮ್ಮಗನ ಸಿನಿಮಾ ಹೇಗಿದೆ?

Spread the love

ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಬಿಟ್ಟು ಹೊದ ನಂತರ ಕನ್ನಡ ನಾಡು ನೋವಿನಲ್ಲಿ ಇದ್ದು, ಅಭಿಮಾನಿಗಳು ಇಂದಿಗೂ ಕಂಬನಿ ಮಿಡಿಯುತ್ತಾರೆ. ಹೀಗಿದ್ದಾಗ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಸ್ಥಾನವನ್ನು ಯುವ ಅವರು ತುಂಬುತ್ತಾರೆ ಎಂಬ ಮಾತು ಅಭಿಮಾನಿಗಳ ಬಾಯಲ್ಲಿ ಕೇಳಿಬರುತ್ತಿದೆ.

ಇದೇ ವೇಳೆ ಯುವರಾಜ್ ಅಭಿನಯ ಮಾಡಿರುವ ಮೊದಲ ಸಿನಿಮಾ ‘ಯುವ’ ಅಬ್ಬರ ಹೇಗಿದೆ ಗೊತ್ತಾ? ಬನ್ನಿ ತಿಳಿಯೋಣ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಫ್ಯಾನ್ಸ್ ಈಗ ಯುವರಾಜ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಹೀಗಾಗಿ ಯುವರಾಜ್ ಅವ್ರ ಮೊದಲ ಸಿನಿಮಾ ಮೇಲೆ ನಿರೀಕ್ಷೆ ಕೂಡ ಡಬಲ್ ಆಗಿದೆ. ಅಲ್ಲದೆ ರಾಜ್ಯದ ಮೂಲೆ ಮೂಲೆಯಲ್ಲಿ ದೊಡ್ಮನೆ ಮೊಮ್ಮಗನ ಚಿತ್ರವು ಅದ್ಧೂರಿಯಾಗಿ ರಿಲೀಸ್ ಆಗಿದೆ. ಹೀಗಾಗಿ ಫ್ಯಾನ್ಸ್ ಕೂಡ ಅದ್ಧೂರಿ ಸಂಭ್ರಮಾಚರಣೆ ನಡೆಸಿದ್ದಾರೆ. ಹಾಗಾದರೆ ಫಸ್ಟ್ ಡೇ ಫಸ್ಟ್ ಶೋ ನೋಡಿದ ಫ್ಯಾನ್ಸ್ ಇದೀಗ ಹೇಳಿದ್ದಾದ್ರು ಏನು? ಹೇಗಿದೆ ಯುವರಾಜ್ ಅವರ ಸಿನಿಮಾ ಹವಾ? ಬನ್ನಿ ತಿಳಿಯೋಣ.

ಯುವರಾಜ್ ಎಂಟ್ರಿಗೆ ಫುಲ್ ಶೇಕ್!

ವರನಟ ಡಾ. ರಾಜ್‌ಕುಮಾರ್ ಅವರು ಕನ್ನಡ ಸಿನಿಮಾ ರಂಗದ ಅನಭಿಷಿಕ್ತ ದೊರೆ ಅಂತಾ ಹೇಳಬಹುದು. ಯಾಕಂದ್ರೆ ಡಾ. ರಾಜ್‌ಕುಮಾರ್ ಅವರು ಕನ್ನಡ ಸಿನಿಮಾ ರಂಗವನ್ನ ಈ ಎತ್ತರಕ್ಕೆ, ಅಂದ್ರೆ ಇಡೀ ಜಗತ್ತೇ ಹೊಗಳುವ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದರು. ಹೀಗೆ ಕನ್ನಡ ಸಿನಿಮಾ ರಂಗವನ್ನ ಕಟ್ಟಿ ಬೆಳೆಸಿದ ದೊಡ್ಮನೆ ಅಂದ್ರೆ ವರನಟ ಡಾ. ರಾಜ್‌ಕುಮಾರ್ ಅವರ ಕುಟುಂಬ ಸದಸ್ಯರು ಕನ್ನಡ ತಾಯಿಯ ಕಲಾ ಸೇವೆ ಮಾಡಿ ಕನ್ನಡಿಗರನ್ನು ರಂಜಿಸಿದ್ದಾರೆ. ಈಗ ಕನ್ನಡ ಸಿನಿಮಾ ರಂಗದಲ್ಲಿ ಡಾ. ರಾಜ್ ಕುಟುಂಬದ, 3ನೇ ತಲೆಮಾರು ಭರ್ಜರಿಯಾಗಿ ಎಂಟ್ರಿ ಕೊಟ್ಟಿದೆ. ಅದ್ರಲ್ಲೂ ಇಂದು ಯುವರಾಜ್ ಅವರ ಎಂಟ್ರಿ ದೇಶದಲ್ಲೂ ಸಂಲಚನ ಸೃಷ್ಟಿಸಿದೆ.

ಡಾ. ರಾಜ್ ಮೊಮ್ಮಗ ಯುವ!

ಕಟ್ಟುಮಸ್ತಾದ ದೇಹ, ಡೈಲಾಗ್ ಡೆಲಿವರಿ ಲೆಕ್ಕಕ್ಕೆ ಬಂದ್ರೆ ತಾತನ ರೀತಿ ಡೈಲಾಗ್‌ ಹೊಡೆಯುವ ನಿರರ್ಗಳತೆ. ಇದು ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವರಾಜ್ ಕೆಪಾಸಿಟಿ. ಮೊದಲ ಸಿನಿಮಾ ರಿಲೀಸ್ ಮೂಲಕವೇ ಯುವ ಅವರು ಇಷ್ಟೆಲ್ಲಾ ಹವಾ ಎಬ್ಬಿಸಿದ್ದಾರೆ. ದೊಡ್ಮನೆಯ ಮೊಮ್ಮಗನ ಸಿನಿಮಾ ಇಂದು ದೇಶಾದ್ಯಂತ ರಿಲೀಸ್ ಆಗಿದ್ದು ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಅಲ್ಲದೆ ಯುವ ಅವರ ಹವಾ ನೋಡಿ ಸಿನಿಮಾ ಇಂಡಸ್ಟ್ರಿ ಕೂಡ ಜೈ ಅಂದಿದೆ. ಜೊತೆಗೆ, ಸೋಷಿಯಲ್ ಮೀಡಿಯಾದಲ್ಲಿ ಯುವರಾಜ್ ಟ್ರೆಂಡ್ ಬಲು ಜೋರಾಗಿದೆ.

 

 

‘ಹೊಂಬಾಳೆ ಫಿಲ್ಮ್ಸ್’ ಯುವ ಅವರ ಮೊದಲ ಸಿನಿಮಾಗೆ ಬಂಡವಾಳ ಹೂಡಿದೆ. ಮೊದಲ ಸಿನಿಮಾಗೆ ಯುವ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದರಲ್ಲೂ ಸಂತೋಷ್ ಆನಂದ್ ರಾಮ್ ಮತ್ತೆ ದೊಡ್ಮನೆ ನಟನಿಗೆ ನಿರ್ದೇಶನ ಮಾಡಿದ್ದಾರೆ. ಹೀಗೆ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು ಇದೀಗ ಆ ಕುತೂಹಲ ನಿಜವಾಗಿದೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ಯುವ ಅವರ ಗುಣಗಾನ ಮಾಡುತ್ತಿದ್ದಾರೆ. ಹಾಗೇ ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ.

ದೊಡ್ಮನೆ ಮೊಮ್ಮಗನಿಗೆ ಭರ್ಜರಿ ಓಪನಿಂಗ್!

ಒಟ್ನಲ್ಲಿ ಯುವರಾಜ್ ಅವರಿಗೆ ದೊಡ್ಡ ಮಟ್ಟದಲ್ಲಿ ಇಂದು ಓಪನಿಂಗ್ ಸಿಕ್ಕಿದ್ದು, ಫ್ಯಾನ್ಸ್ ಈ ಸಿನಿಮಾ ನೋಡಿ ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ. ಹಾಗೇ, ಯುವ ಸಿನಿಮಾ ಮೂಲಕ ಪುನೀತ್ ರಾಜ್‌ಕುಮಾರ್ ಅವರನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುತ್ತಿದ್ದೇವೆ ಎಂಬ ಮಾತು ಹೇಳುತ್ತಿದ್ದಾರೆ ಫ್ಯಾನ್ಸ್. ಇದೇ ಕಾರಣಕ್ಕೆ ಯುವ ಸಿನಿಮಾ ಈಗ ಫುಲ್ ಟ್ರೆಂಡ್ ಆಗುತ್ತಿದೆ. ಹಾಗೇ ಹಲವು ಥಿಯೇಟರ್‌ಗಳು ಹೌಸ್‌ಫುಲ್ ಪ್ರದರ್ಶನ ಕಾಣುವ ಮೂಲಕ ಯುವ ಅವರ ಚಿತ್ರ ಭರ್ಜರಿ ಗಳಿಕೆ ಕೂಡ ಮಾಡುತ್ತಿದೆ. ಈ ಮೂಲಕ ಬಾಕ್ಸ್ ಆಫಿಸ್‌ನಲ್ಲೂ ದಾಖಲೆಗಳನ್ನು ನಿರ್ಮಾಣ ಮಾಡುವ ಸಾಧ್ಯತೆ ದಟ್ಟವಾಗಿದೆ.


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ