ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಇಂದು(ಮಾ.21) ಮಧ್ಯಾಹ್ನ ವಿದ್ಯಾರ್ಥಿ(Student) ಧ್ರುವ್ ಎಂಬಾತ ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಚಂದ್ರಾಲೇಔಟ್ ಠಾಣೆಯಲ್ಲಿ ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು, ಮಾ.21: ನಮ್ಮ ಮೆಟ್ರೋ(Namma Metro) ಟ್ರ್ಯಾಕ್ ಮೇಲೆ ಜಿಗಿದು ವಿದ್ಯಾರ್ಥಿ(Student) ಧ್ರುವ್ ಎಂಬಾತ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋನಿಲ್ದಾಣದಲ್ಲಿ ಇಂದು(ಮಾ.21) ಮಧ್ಯಾಹ್ನ ನಡೆದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ನ್ಯಾಷನಲ್ ಲಾ ಕಾಲೇಜ್ ಅಫ್ ಇಂಡಿಯಾ ಯುನಿವರ್ಸಿಟಿ ಹಾಸ್ಟೆಲ್ ಉಸ್ತುವಾರಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದು, ಯುಡಿಆರ್(ಅಸಹಜ ಸಾವು) ಪ್ರಕರಣ ದಾಖಲು ಮಾಡಲಾಗಿದೆ.
ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಶಂಕೆ
ಕ್ಲಾಸ್ ಮೇಟ್ಗೆ ಹೇಳಿ ಹಾಸ್ಟೆಲ್ನಿಂದ ಹೊರಗೆ ಬಂದಿದ್ದ ಧ್ರುವ್, ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವ ಶಂಕೆ ವ್ಯಕ್ತವಾಗಿದೆ. ಜೊತೆಗೆ ಅದಕ್ಕಾಗಿಯೇ 3 ತಿಂಗಳಿಂದ ಮಾತ್ರೆ ತೆಗೆದುಕೊಳ್ಳುತ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ನಾಳೆ(ಮಾ.22) ಪೋಷಕರಿಂದ ಮಾಹಿತಿ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಜೊತೆಗೆ ಘಟನೆ ಕುರಿತು ವಿದ್ಯಾರ್ಥಿಗಳು, ಆತನ ಸ್ನೇಹಿತರ ಬಳಿಯೂ ಮಾಹಿತಿ ಪಡೆಯುತ್ತಿದ್ದಾರೆ.
Laxmi News 24×7