ಧಾರವಾಡ ಮತ್ತು ಹಾವೇರಿ ಲೋಕಸಭಾ ಕ್ಷೇತ್ರಗಳ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆ ಜಗದೀಶ್ ಶೆಟ್ಟರ್ (Jagadish Shettar) ಗೊಂದಲಕ್ಕೀಡಾಗಿದ್ದರು.ಬಳಿಕ ಅವರಿಗೆ ಬೆಳಗಾವಿ (Belagavi) ಕ್ಷೇತ್ರದ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದುಬಂದಿತ್ತು. ಇದೀಗ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಟಿಕೆಟ್ ಸಿಕ್ಕಿರುವುದನ್ನ ಖಚಿತಪಡಿಸಿದ್ದಾರೆ.
ಹುಬ್ಬಳ್ಳಿ,ಮಾ.21: ಮಾಜಿ ಸಿಎಂ ಜಗದೀಶ್ ಶೆಟ್ಟರ್(Jagadish Shettar)ಗೆ ಟಿಕೆಟ್ ಕನ್ಫರ್ಮ್ ಆಗಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ಟಿಕೆಟ್ ಫೈನಲ್ ಆಗಿದೆ ಎಂದು ನಮಗೆ ಸಿಹಿ ಕೊಟ್ಟಿದ್ದಾರೆ ಎಂದು ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್(Pradeep Shettar) ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಮಾತನಾಡಿದ ಅವರು, ‘ನಾನು ಸಹೋದರ ಜೊತೆ ದೆಹಲಿಗೆ ಹೋಗಿದ್ದೆ.
ನಡ್ಡಾ ಅವರನ್ನು ಭೇಟಿ ಮಾಡಿದ್ದೇವೆ. ಟಿಕೆಟ್ ನಿಮಗೆ ಸಿಕ್ಕಿದ್ದು, ನೀವು ಕ್ಷೇತ್ರದಲ್ಲಿ ಪ್ರಚಾರ ಮಾಡಿ ಎಂದು ಸಿಹಿಯನ್ನು ಸಹ ಕೊಟ್ಟಿದ್ದಾರೆ ಎಂದು ಪ್ರದೀಪ್ ಶೆಟ್ಟರ್ ಹೇಳಿದರು.
Laxmi News 24×7