ಬೆಂಗಳೂರು, ನ.15- ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಪಟಾಕಿ ನಿಷೇಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ನೆಪ ಮಾತ್ರಕ್ಕೆ ಎಂಬಂತಾಗಿದ್ದು, ಬೆಳಕಿನ ಹಬ್ಬದ ಮೊದಲ ದಿನವೇ ಪಟಾಕಿ ಸದ್ದು ಜೋರಾಗಿತ್ತು. ಪಟಾಕಿ ಮಾರಾಟ ಮತ್ತು ಸಿಡಿಸುವುದರ ಮೇಲೆ ರಾಜ್ಯ ಸರ್ಕಾರ ನಿಷೇಧ ವಿಸಿತ್ತು. ರಾಸಾಯನಿಕ ಮಿಶ್ರಣದ ಪಟಾಕಿಗಳ ಬದಲಾಗಿ ಪರಿಸರಕ್ಕೆ ಹೆಚ್ಚಿನ ಹಾನಿಯಾಗದ ಹಸಿರು ಪಟಾಕಿಗಳನ್ನು ಬಳಸಲು ಸಲಹೆ ನೀಡಲಾಗಿತ್ತು.
ದೀಪಾವಳಿಯ ಮೊದಲ ದಿನ ವಾದ ನಿನ್ನೆ ಸಂಜೆ ಪಟಾಕಿಯ ಸದ್ದು ಎಂದಿನಂತೆ ಜೋರಿತ್ತು. ಎಲ್ಲೆಡೆ ಮಕ್ಕಳು, ದೊಡ್ಡವರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಸಿರು ಪಟಾಕಿಗಳು ದುಬಾರಿಯಾಗಿರುವುದರಿಂದ ಜನ ಮಾಮೂಲಿ ಪಟಾಕಿಗಳನ್ನೇ ಹೆಚ್ಚು ಖರೀದಿಸಿದರು.
ಏಕಾಏಕಿ ಪಟಾಕಿ ನಿಷೇಸಿದ ರಾಜ್ಯ ಸರ್ಕಾರ ಕಾನೂನು ಮೀರುವವರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬ ಸ್ಪಷ್ಟ ಮಾರ್ಗಸೂಚಿ ರೂಪಿಸುವಲ್ಲಿ ವಿಫಲವಾಗಿದೆ. ನಿನ್ನೆ ಅಪಾಯಕಾರಿ ಪಟಾಕಿ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿದರಾದರೂ ಕಠಿಣ ಕ್ರಮ ಕೈಗೊಳ್ಳದೆ ಎಚ್ಚರಿಕೆ ಕೊಟ್ಟು ಬಿಟ್ಟು ಬಂದಿದ್ದಾರೆ.ಸರ್ಕಾರ ಪಟಾಕಿ ನಿಷೇಸಿರುವ ನಿರ್ಧಾರ ಸರಿಯಿದ್ದರೂ ಅದರ ಜಾರಿಯ ವೇಳೆ ಎದುರಾದ ಲೋಪಗಳಿಂದ ಮತ್ತೆ ಕೊರೊನಾ ವಕ್ಕರಿಸುವ ಚಿಂತೆ ಕಾಡಲಾರಂಭಿಸಿದೆ