Breaking News

ಜಮೀನು ಮಾರಾಟದ ಹಣಕ್ಕಾಗಿ ತಂದೆಯನ್ನೇ ಕೊಂದ ಮಕ್ಕಳು

Spread the love

ದಗ: ಜಮೀನು ಮಾರಾಟದಿಂದ ಸಿಕ್ಕ ಹಣವನ್ನು ಸಮನಾಗಿ ಹಂಚಿಕೆ ಮಾಡಿಲ್ಲ ಎಂಬ ವಿಚಾರಕ್ಕೆ ಮಕ್ಕಳೇ ತಂದೆಯನ್ನು ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಗುರುವಾರ ನಡೆದಿದೆ.

ವಿವೇಕಾನಂದ ಕರಿಯಲ್ಲಪ್ಪ (65) ಕೊಲೆಯಾದ ವ್ಯಕ್ತಿ.

ವಿವೇಕಾನಂದ ಅವರ ಮೊದಲನೇ ಪತ್ನಿ ಕಸ್ತೂರಿ ಅವರ ಮಕ್ಕಳಾದ ಮಲ್ಲೇಶ ಮತ್ತು ಪ್ರಕಾಶ ಆರೋಪಿಗಳು.

ವಿವೇಕಾನಂದ ಅವರು ಪಿತ್ರಾರ್ಜಿತವಾಗಿ ಬಂದಿದ್ದ ಆರು ಎಕರೆ ಜಮೀನಿನಲ್ಲಿ ಮೂರು ಎಕರೆಯನ್ನು ಮಾರಾಟ ಮಾಡಿದ್ದರು. ಅದರಿಂದ ಬಂದ ಹಣವನ್ನು ಹಂಚಿಕೆ ಮಾಡಿದ್ದರು. ಈ ವಿಚಾರವಾಗಿ ಮೊದಲ ಹೆಂಡತಿ ಮಕ್ಕಳು ಮತ್ತು ಇವರ ನಡುವೆ ಗಲಾಟೆ ನಡೆದಿತ್ತು.

ಎರಡನೇ ಪತ್ನಿ ರೇಖಾ ಅವರು ಗುರುವಾರ ಜಮೀನಿಗೆ ತೆರಳಿದ್ದರು. ಈ ವೇಳೆ ಮನೆಗೆ ಬಂದ ಆರೋಪಿಗಳು ತಂದೆ ವಿವೇಕಾನಂದ ಅವರನ್ನು ಕೂಡಿಹಾಕಿ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ