ನವದೆಹಲಿ : ಕೇಂದ್ರ ಸರ್ಕಾರಿ ನೌಕರರಿಗೆ ಶೇ. 4 ತುಟ್ಟಿಭತ್ಯೆ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಜನವರಿ 1, 2024 ರಿಂದ ಜಾರಿಗೆ ಬರುವಂತೆ ಮೂಲ ವೇತನದ 46% ರಿಂದ 50% ಕ್ಕೆ ಹೆಚ್ಚಿಸಲಾಗುವುದು. ತುಟ್ಟಿಭತ್ಯೆಯು ಸಂಭಾವನೆಯ ಒಂದು ವಿಶಿಷ್ಟ ಅಂಶವಾಗಿ ಮುಂದುವರಿಯುತ್ತದೆ ಮತ್ತು ಎಫ್‌ಆರ್ 9 (21) ರ ವ್ಯಾಪ್ತಿಯಲ್ಲಿ ವೇತನವೆಂದು ಪರಿಗಣಿಸಲಾಗುವುದಿಲ್ಲ.50 ಪೈಸೆಗಿಂತ ಕಡಿಮೆ ಭಾಗಗಳನ್ನು ನಿರ್ಲಕ್ಷಿಸಬಹುದು ಎಂದು ಹೇಳಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಕಳೆದ ಗುರುವಾರ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ ಮಾಡುವ ಬೇಡಿಕೆಗೆ ಅಸ್ತು ಎಂದಿತ್ತು, 2024ರ ಜನವರಿ 1ರಿಂದ ಅನ್ವಯವಾಗುವಂತೆ ಈ ಹೆಚ್ಚಳ ಮಾಡಲಾಗಿದ್ದು. ಎರಡು ತಿಂಗಳ ಹಿಂಬಾಕಿಯೊಂದಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು.
ಕಳೆದ ಬಾರಿ ಶೇ. 4ರಷ್ಟು ತುಟ್ಟಿ ಭತ್ಯೆಯನ್ನು 2023ರ ಅಕ್ಟೋಬರ್ ನಲ್ಲಿ ಏರಿಕೆ ಮಾಡಲಾಗಿತ್ತು. ನೌಕರರ ಮೂಲ ವೇತನ ಆಧರಿಸಿ ತುಟ್ಟಿಭತ್ಯೆ ಅನ್ನು ನೀಡಲಾಗುತ್ತದೆ.
Laxmi News 24×7