ಕಾರವಾರ: ಹಕ್ಕುಪತ್ರ ವಿತರಣೆಗೆ ರೈತರೊಬ್ಬರಿಂದ ಲಂಚ ಪಡೆದಿದ್ದ ಅಂಕೋಲಾ ತಹಶೀಲ್ದಾರ ಕಚೇರಿಯ ಪ್ರಥಮ ದರ್ಜೆ ಸಹಾಯಕರೊಬ್ಬರಿಗೆ (ಎಫ್‌ಡಿಸಿ) ಮೂರು ವರ್ಷ ಜೈಲು ಶಿಕ್ಷೆ ಮತ್ತು ₹15 ಸಾವಿರ ದಂಡ ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಆದೇಶಿಸಿದೆ.
ಶಬ್ಬೀರ್ ಖಾಸಿಮ್ ಶೇಖ್ ಶಿಕ್ಷೆಗೆ ಗುರಿಯಾದವರಾಗಿದ್ದಾರೆ.ಅಂಕೋಲಾ ತಾಲ್ಲೂಕಿನ ಬೊಬ್ರುವಾಡಾದ ಗಣೇಶ ನಾಯ್ಕ ಅವರ ಜಮೀನಿನ ಪಹಣಿ ಪತ್ರದ 9ನೇ ಕಾಲಂನಲ್ಲಿ ಕರ್ನಾಟಕ ಸರ್ಕಾರದ ಹಕ್ಕು ಕಡಿಮೆ ಮಾಡಿ ಅವರ ತಾಯಿ ಶಾರದಾ ನಾಯ್ಕ ಅವರನ್ನು ವಾರಸುದಾರರನ್ನಾಗಿ ಸೇರಿಸಿ ನಮೂನೆ 10ರ ಹಕ್ಕು ಪತ್ರ ವಿತರಿಸಲು ₹2,500 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
₹1,500 ಲಂಚ ಪಡೆಯುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ನೌಕರನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿತ್ತು.
ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಪರವಾಗಿ ವಿಶೇಷ ಸರ್ಕಾರಿ ಆಭಿಯೋಜಕ ಲಕ್ಷ್ಮೀಕಾಂತ ಪ್ರಭು ವಾದ ಮಂಡಿಸಿದ್ದರು.
Laxmi News 24×7