Breaking News

ಗೃಹ ಸಚಿವರ ಮನೆಯೊಳಗೆ ನುಗ್ಗಿ ಕದ್ದು ಹಾಲು ಕುಡಿದ ಕೋತಿ

Spread the love

ತುಮಕೂರು, ಫೆಬ್ರವರಿ 26: ಬೆಕ್ಕು ಕದ್ದು ಹಾಲು ಕುಡಿಯುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಕೋತಿ ಗೃಹ ಸಚಿವರ ಮನೆಯಲ್ಲಿ ಕದ್ದು ಹಾಲು ಕುಡಿದಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ್ (G Parmeshwar)​ ಅವರು ಇಂದು (ಫೆ.26) ತುಮಕೂರಿನ (Tumakur) ಸಿದ್ದಾರ್ಥ ನಗರದಲ್ಲಿರುವ ಮನೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸುತ್ತಿದ್ದರು.

ಈ ವೇಳೆ ಮನಗೆ ಬಂದ ಕೋತಿ, ನೆರವಾಗಿ ಒಳಗೆ ನುಗ್ಗಿದೆ. ಬಳಿಕ ಫ್ರೀಡ್ಜ್ ಬಾಗಿಲು ತೆಗೆದು ಹಾಲಿ ಪಾಕೇಟ್ ತೆಗೆದುಕೊಂಡು, ಮೆಟ್ಟಿಲಿನ ಮೇಲೆ ಕುಳಿತು ಹಾಲು ಕುಡಿದಿದೆ.

 

ಭದ್ರತಾ ಸಿಬ್ಬಂದಿ ಕೋತಿ ಓಡಿಸಲು ಮುಂದಾದಾಗ, ಗೃಹ ಸಚಿವರು ಓಡಿಸಬೇಡಿ ಎಂದು ತಡೆದರು. ಬಳಿಕ ಕೋತಿ ಹಾಲು ಕುಡಿದು ಹೊರ ನಡೆದಿದೆ.

ಗೃಹ ಸಚಿವರ ಮನೆಯಲ್ಲೇ ಕೋತಿ ಹಾಲು ಕಳ್ಳತನ ಮಾಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ನೆಟ್ಟಿಗರು ಹಲವು ರೀತಿ ಕಾಮೆಂಟ್​ ಮಾಡಿದ್ದಾರೆ.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ