Breaking News

ಇಂಡಿಯಾ ಮೈತ್ರಿಕೂಟ ಹೊಸ ಬಾಟಲಿಯಲ್ಲಿನ ಹಳೆಯ ವೈನ್: ಮೋದಿ ವ್ಯಂಗ್ಯ

Spread the love

ಇಂಡಿಯಾ ಮೈತ್ರಿಕೂಟ ಹೊಸ ಬಾಟಲಿಯಲ್ಲಿನ ಹಳೆಯ ವೈನ್: ಮೋದಿ ವ್ಯಂಗ್ಯ

ಕ್ನೋ : ತಮ್ಮ ವಿರುದ್ಧ ಒಗ್ಗೂಡುತ್ತಿರುವ ಇಂಡಿಯಾ ಮೈತ್ರಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಅದೊಂದು ಹೊಸ ಬಾಟಲಿಯಲ್ಲಿರುವ ಹಳೆಯ ವೈನ್ ಎಂದು ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ವಾರಣಾಸಿಯಲ್ಲಿ ಮಾತನಾಡಿರುವ ಮೋದಿ, ಅವರು ಪ್ರತಿ ಚುನಾವಣೆಗೂ ಮುನ್ನ ಒಗ್ಗೂಡುತ್ತಾರೆ ಮತ್ತು ಗೆಲುವು ಪಡೆಯುವಲ್ಲಿ ವಿಫಲವಾದಾಗ ಪರಸ್ಪರ ನಿಂದಿಸಿಕೊಳ್ಳುತ್ತಾರೆ.

INDIA bloc: ಇಂಡಿಯಾ ಮೈತ್ರಿಕೂಟ ಹೊಸ ಬಾಟಲಿಯಲ್ಲಿನ ಹಳೆಯ ವೈನ್:  ಮೋದಿ ವ್ಯಂಗ್ಯ

ಅವರು ಒಂದು ರೀತಿ ಹೊಸ ಬಾಟಲಿಯಲ್ಲಿರುವ ಹಳೆಯ ವೈನ್ʼನಂತೆ ಇದ್ದಾರೆ. ಅವರು ಅಧಿಕಾರದ ದಾಹಕ್ಕಾಗಿ ಮಾತ್ರ ಮೈತ್ರಿ ಮಾಡಿಕೊಳ್ಳುತ್ತಾರೆ. ಅವರಿಗೆ ದೇಶದ ಅಭಿವೃದ್ಧಿ ಬೇಕಾಗಿಲ್ಲ ಎಂದು ಟೀಕಿಸಿದರು.

ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಿಂದೂಗಳ ಪವಿತ್ರ ತೀರ್ಥ ಕ್ಷೇತ್ರ ಕಾಶಿಯಲ್ಲಿ ರಾತ್ರಿ ವೇಳೆ ಸಾಗುವಾಗ ಯುವಕರು ಕುಡಿದು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರಂತೆ, ನೃತ್ಯ ಮಾಡುತ್ತಿದ್ದರು ಎನ್ನುವ ಹೇಳಿಕೆ ಖಂಡಿಸಿರುವ ಪ್ರಧಾನಿ ಮೋದಿ, ಇಷ್ಟು ವರ್ಷ ನನ್ನನ್ನು ಅವಹೇಳನ ಮಾಡಿದ್ರಿ. ಈಗ ಉತ್ತರ ಪ್ರದೇಶದ ಯುವಕರ ಮೇಲೆ ನಿಮ್ಮ ಹತಾಶೆ ತೋರಿಸಿಕೊಳ್ಳುತ್ತಿದ್ದೀರಿ ಎಂದಿದ್ದಾರೆ.


Spread the love

About Laxminews 24x7

Check Also

ಬಿಗ್‌ ಡೀಲ್‌ ಸಕ್ಸಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌ ಸಹಿ

Spread the loveವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕೊನೆಗೂ ಸಕ್ಸಸ್‌ ಕಂಡಿದೆ. ರಷ್ಯಾ ತೈಲ ಖರೀದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ