ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ದೇವಸ್ಥಾನ ಕಟ್ಟಡದ ಉದ್ಘಾಟನೆ ನಿಮಿತ್ತವಾಗಿ ಆಧ್ಯಾತ್ಮಿಕ ನಾಟಕವನ್ನು ಹಮ್ಮಿಕೊಂಡಿದ್ದರು.


ಈ ಸಂದರ್ಭದಲ್ಲಿ ಪೂಜ್ಯರಿಗೆ, ಊರಿನ ಮುಖಂಡರಿಗೆ, ರೈತರಿಗೆ ಹಾಗೂ ಕಾರ್ಖಾನೆ ಸಿಬ್ಬಂದಿ ವರ್ಗದವರಿಗೆ ಸತ್ಕಾರ ಮಾಡಿದರು.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು.
ಯುವ ನಾಯಕ ಸಂತೋಷ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಅವರಣದಲ್ಲಿ ಶ್ರೀ ಮಾರುತೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದರು.


ಈ ವಿಶೇಷ ಪೂಜೆ ಸಂದರ್ಭದಲ್ಲಿ ಶ್ರೀಮತಿ ಜಯಶ್ರೀ ರಮೇಶ್ ಜಾರಕಿಹೊಳಿ ಅವರು ಹಾಗೂ ಶ್ರೀಮತಿ ಅಂಬಿಕಾ ಸಂತೋಷ ಜಾರಕಿಹೊಳಿ ಅವರು ಭಾಗವಹಿಸಿದ್ದರು.
ಹಿರೇನಂದಿ ಗ್ರಾಮದಿಂದ ಕಾರ್ಖಾನೆಯವರೆಗೆ ಭವ್ಯ ಶೋಭಾಯಾತ್ರೆ ಹಮ್ಮಿಕೊಂಡಿದ್ದು ಈ ಶೋಭಾಯಾತ್ರೆಯಲ್ಲಿ ಸಾವಿರಾರು ಮಹಿಳೆಯರು ಕುಂಭಮೇಳ ಮಾಡಿದರು, ಉತ್ಸಾಹದಿಂದ ಯುವಕರು ಗುಲಾಲದಲ್ಲಿ ಕುಣಿದು ಕುಪ್ಪಳಿಸಿದರು.


ನಂತರ ಊರಿನ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಹಾಗೂ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
Laxmi News 24×7