Breaking News

ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ರೆ ಹೇಗೆ ಹುಷಾರಾಗ್ತೇವೆ- ಸರ್ಕಾರಕ್ಕೆ ಸೋಂಕಿತರ ಪ್ರಶ್ನೆ

Spread the love

ಹಾಸನ: ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ದರೆ ನಾವು ಹೇಗೆ ಹುಷಾರಾಗುತ್ತೇವೆ. ಬರೀ ಅನ್ನ ಬಿಟ್ರೆ ನಮಗೆ ಬೇರೆ ಆಹಾರ ಕೊಡುತ್ತಿಲ್ಲ ಎಂದು ಹಾಸನದ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ತಮಗೆ ನೀಡುತ್ತಿರುವ ಚಿಕಿತ್ಸಾ ವಿಧಾನದ ಬಗ್ಗೆ ಅಸಮಾಧಾನ ಹೊರಹಾಕಿ ವಿಡಿಯೋ ಮಾಡಿರುವ ಕೊರೊನಾ ಸೋಂಕಿತರು, ನಮಗೆ ಆರಂಭದ ಐದು ದಿನ ಮಾತ್ರ ಮೆಡಿಸಿನ್ ಕೊಟ್ರು. ಈಗ ಮೆಡಿಸಿನ್ ಕೊಡ್ತಿಲ್ಲ. ಬರೀ ಅನ್ನ ಕೊಡ್ತಾರೆ. ಮೊಟ್ಟೆ ಮುದ್ದೆ ಕೊಡ್ತಿಲ್ಲ. ನಾವು ಬಂದು 35 ದಿನದ ಮೇಲಾಯ್ತು. ಪ್ರತಿ ಟೆಸ್ಟ್‍ನಲ್ಲೂ ಪಾಸಿಟಿವ್ ಬರ್ತಿದೆ ಅಂತಾ ಹೊರಗೆ ಕಳುಹಿಸುತ್ತಿಲ್ಲ. ನಮಗೆ ಪೌಷ್ಟಿಕಾಂಶಯುಕ್ತ ಆಹಾರ ಕೊಡದಿದ್ರೆ ನಾವು ಹೇಗೆ ಹುಷಾರಾಗುತ್ತೇವೆ ಎಂದು ಸೋಂಕಿತತು ಅಸಮಾಧಾನ ಹೊರಹಾಕಿದ್ದಾರೆ.

ನಮಗೆ ನೆಗೆಟಿವ್ ಬರುವವರೆಗೂ ಇರಿ ಅಂತಾರೆ. ಆದರೆ ಒಳ್ಳೆ ಊಟ ಸಿಗದಿದ್ರೆ ನೆಗೆಟಿವ್ ಹೇಗೆ ಬರುತ್ತೆ. ಅಷ್ಟೇ ಅಲ್ಲದೆ ಕೆಲವರು ಹುಷಾರಾಗಿ ಹೋದ್ರೆ ಮತ್ತೆ ಕೆಲವರು ಹೊಸ ರೋಗಿಗಳು ಬರುತ್ತಿದ್ದಾರೆ. ಹೀಗೆ ಬರುವ ಹೊಸ ರೋಗಿಗಳ ಜೊತೆ ನಮ್ಮನ್ನು ಇಟ್ಟರೆ ನಮ್ಮ ಖಾಯಿಲೆ ಹೇಗೆ ಹುಷಾರಾಗುತ್ತೆ. ಸೋಪು, ಬಿಸಿ ನೀರು ಸೇರಿದಂತೆ ಕೆಲವೊಂದು ಮೂಲಭೂತ ಅವಶ್ಯಕ ವಸ್ತು ಸಿಗುತ್ತಿಲ್ಲ. ಆರಂಭದಲ್ಲಿ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಈಗ ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ನಾವು ಕೆಲವರು ರೈತರಿದ್ದೇವೆ. ಬೆಳೆದು ನಿಂತ ಬೆಳೆ ಕಟಾವಿಗೂ ಸಾಧ್ಯವಾಗದೆ ಆಸ್ಪತ್ರೆಯಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೆ ಸೂಕ್ತ ರೀತಿಯಲ್ಲಿ ಸಹಾಯ ಮಾಡಿ ಎಂದು ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಹಾಸನದಿಂದಲೇ ಬರುವ ಸಾಧ್ಯತೆ ಇದೆ: ಶಿವಯೋಗಿ ಸ್ವಾಮೀಜಿ ಭವಿಷ್ಯ

Spread the loveಹಾಸನ: ಮುಂಬರುವ ದಿನಮಾನಗಳಲ್ಲಿ ಕರ್ನಾಟಕ ಮಾತ್ರವಲ್ಲದೇ ದೇಶದ ರಾಜಕೀಯದಲ್ಲಿಯೇ ದೊಡ್ಡ ಪರಿವರ್ತನೆಗಳು ನಡೆಯಲಿದ್ದು, ಹಾಸನ  ಜಿಲ್ಲೆಯೇ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ