ಆರ್​ಎಸ್​ಎಸ್​ ಕಾರ್ಯಕರ್ತ ನಾರಾಯಣ ಭಾಂಡಗೆ ಬಿಜೆಪಿ ರಾಜಸಭೆ ಟಿಕೆಟ್​; ಇಲ್ಲಿದೆ ವ್ಯಕ್ತಿಚಿತ್ರ

Spread the love

ಬಾಗಲಕೋಟೆ, ಫೆ.11: ರಾಜ್ಯಸಭೆ ಚುನಾವಣೆಗೆ (Rajya Sabha elections) ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಇದೀಗ ಪ್ರಕಟ ಮಾಡಲಾಗಿದ್ದು, ಮಾಜಿ ಸಚಿವ ಸೋಮಣ್ಣಗೆರಾಜ್ಯಸಭೆ ಟಿಕೆಟ್​ ಕೈತಪ್ಪಿದೆ. ಅವರ ಬದಲು ಬಾಗಲಕೋಟೆಯ ನಾರಾಯಣ ಭಾಂಡ(Narayan Banda)ಗೆ ಟಿಕೆಟ್​​ ನೀಡಲಾಗಿದೆ. ಈ ಹಿನ್ನಲೆ ಬಾಗಲಕೋಟೆ ನಾರಾಯಣ ಬಾಂಡ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಬಾಂಡ ಅವರಿಗೆ ಕುಟುಂಬಸ್ಥರು ಸಿಹಿ ತಿನ್ನಿಸಿ ಸಂಭ್ರಮಪಟ್ಟಿದ್ದಾರೆ. ಮನೆಯಲ್ಲಿ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರ ಪರ ಘೋಷಣೆ ಮಾಡಿ, ಮನೆ ಹೆಣ್ಣುಮಕ್ಕಳು ವಿಕ್ಟರಿ ಸಿಂಬಾಲ್‌ ತೋರಿಸಿ ಸಂತಸಪಟ್ಟಿದ್ದಾರೆ.

ಈ ಕುರಿತು ಮಾತನಾಡಿದ ನಾರಾಯಣ ಭಾಂಡ, ‘ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಜ್ಯಸಭೆ ಟಿಕೆಟ್ ನೀಡಿದ್ದಕ್ಕೆ ಸಂತಸವಾಗಿದೆ. ಇಂತಹ ಕಾರ್ಯ ಕೇವಲ ಬಿಜೆಪಿ ಪಕ್ಷದಲ್ಲಿ ಮಾತ್ರ ಸಾಧ್ಯ. ನಾನು ಅಯೋದ್ಯಾ ರಾಮಮಂದಿರ‌ ಹೋರಾಟದಲ್ಲಿ ಭಾಗಿಯಾಗಿ ಆಗ ಜೈಲು ಸೇರಿದವನು. ಅಯೋದ್ಯಾ ವಿವಾಧಿತ ಕಟ್ಟಡ ಬೀಳೋದನ್ನು ಕಣ್ಣಾರೆ ಕಂಡವನು. ಈಗ ರಾಮಮಂದಿರ‌ ನಿರ್ಮಾಣವಾಗಿ ರಾಮಲಲ್ಲಾನ ಪ್ರತಿಷ್ಟಾಪನೆ ಕೂಡ ಕಂಡವನು. ಇದೀಗ ನನಗೆ ಡಬಲ್ ಖುಷಿಯಾಗಿದೆ ಎಂದರು.


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ