Breaking News

ಇ ಗ್ರಂಥಾಲಯದಲ್ಲಿ ರೈತ ಆತ್ಮಹತ್ಯೆ

Spread the love

ಹುಕ್ಕೇರಿ: ಸ್ಥಳೀಯ ಕೋರ್ಟ್ ಆವರಣದಲ್ಲಿರುವ ಇ- ಗ್ರಂಥಾಲಯದ ಸಂಗ್ರಹ ಕೊಠಡಿಯಲ್ಲಿ ವಕೀಲೆಯೊಬ್ಬರ ಪತಿ, ರೈತ ಲಗಮಪ್ಪ ಹೊಸೂರಿ(48) ಗುರುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ತಾಲ್ಲೂಕಿನ ನೇರ್ಲಿ ಗ್ರಾಮದವರಾದ ಲಗಮಪ್ಪ ಜಾಬಾಪುರದಲ್ಲಿ ವಾಸಿಸುತ್ತಿದ್ದರು.

ಗ್ರಾಮದಲ್ಲಿ ಕೃಷಿ ಮಾಡಿಕೊಂಡಿದ್ದ ಅವರು, ವಿವಿಧ ಸಂಘ ಸಂಸ್ಥೆಗಳಲ್ಲಿ ಮತ್ತು ಕೈಗಡವಾಗಿ ₹5.20 ಲಕ್ಷ ಸಾಲ ಮಾಡಿದ್ದರು’ ಎಂದು ಅವರ ಪತ್ನಿ ಅನಿತಾ ಕುಲಕರ್ಣಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

‘ಸಾಲ ತೀರಿಸಲಾಗದೆ ಬೇಸತ್ತು ಮಧ್ಯಾಹ್ನದ ವೇಳೆ ಕೋರ್ಟ್ ಆವರಣದಲ್ಲಿರುವ ಇ- ಗ್ರಂಥಾಲಯದ ಸಂಗ್ರಹ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ನಾವು ಗೆಲುವಿನ ಅಂತರ ನೋಡುತ್ತಿಲ್ಲ, ಗೆಲುವು ಮಾತ್ರ ನೋಡುತ್ತಿದ್ದೇವೆ : ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ

Spread the love ಹಾವೇರಿ : ಮುಂದಿನ ತಿಂಗಳು ನವೆಂಬರ್ 13ರಂದು ರಾಜ್ಯದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ರಾಮನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ