Breaking News

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ

Spread the love

ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಆದರೆ ಶಾಲಾ ಕಾಲೇಜು ಪುನರಾರಂಭದ ಕುರಿತು ಇಂದು ಯಾವುದೇ ಚರ್ಚೆಯಾಗಿಲ್ಲ ಎಂದು ತಿಳಿದುಬಂದಿದೆ.
ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ.
1. ಮೈಸೂರಿನ ಹೂಟಗಳ್ಳಿ ನಗರಸಭೆಯಾಗಿ ಮೇಲ್ದರ್ಜೆಗೆ
2. ಮಂಡ್ಯದ ಮೈ ಶುಗರ್ ಕಾರ್ಖಾನೆಯನ್ನು ಹೊರಗುತ್ತಿಗೆ ನಿರ್ವಹಣೆಗೆ ಕೊಡಲು ನಿರ್ಧಾರ
3. ಲಿಂಗಸುಗೂರು ಕೋರ್ಟ್ ಕಾಂಪ್ಲೆಕ್ಸ್ ಗೆ 82ಕೋಟಿ
4. ಬೆಂಗಳೂರು ಉತ್ತರ ತಾಲೂಕಿನಲ್ಲಿ 80 ಎಕರೆ ಜಮೀನಿನಲ್ಲಿ ಮಣಿಪಾಲ ಅಕಾಡೆಮಿಯವರು ರಸ್ತೆ ನಿರ್ಮಿಸಲು ಅನುಮತಿ.
5. ಮೈಸೂರು ಜಿಲ್ಲೆ ಶ್ರೀರಾಂಪುರ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ
6. ಆದಿಚುಂಚನಗಿರಿ ಮಠಕ್ಕೆ ನೀಡಿದ್ದ 18ಗುಂಟೆ ಜಮೀನು ವಾಪಸ್
7. ಚರ್ಚ್ ಸ್ಟ್ರೀಟ್ ನಗರ ಟೆಂಡರ್ ಶ್ಯೂರ್ ಹೆಚ್ಚುವರಿ 18ಕೋಟಿ ಪರಿಷ್ಕೃತ ಅಂದಾಜು
8. ಹಾರಂಗಿ ಜಲಾಶಯ ಅಭಿವೃದ್ಧಿಗೆ 130 ಕೋಟಿ
9. ಬಿಡಿಎ ನಿವೇಶನಗುತ್ತಿಗೆ ಹಣ ನೀಡದವರು 50% ಬಡ್ಡಿ ಕಟ್ಟಿದರೆ ನಿವೇಶನ ನೀಡಲು ಅವಕಾಶ
10. ಉ.ಕ ಮುಂಡಗೋಡದ ಕೆರೆ ನೀರು ತುಂಬಿಸಲು 225ಕೋಟಿ
11. ಮಾವಳ್ಳಿಪುರ ಘನತ್ಯಾಜ್ಯ ವಿಲೇವಾರಿಗೆ ಬೂಟ್ ಮಾದರಿಯಲ್ಲಿ ಫಾರ್ಮ್ ಗ್ರೀನಿಂಗ್ ಸಂಸ್ಥೆಗೆ 19ವರ್ಷಕ್ಕೆ ಗುತ್ತಿಗೆ.
12. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರೊಬಾಟಿಕ್ ಪಾರ್ಕ್ ಸ್ಥಾಪನೆಗೆ ಐಟಿ ಇಲಾಖೆ ಹಾಗೂ ಭಾರತ ವಿಜ್ಞಾನ ಸಂಸ್ಥೆಗೆ ಅನುಮತಿ
13. ಶಾಲಾ ಕಾಲೇಜು ಪುನರಾರಂಭದ ಬಗ್ಗೆ ಇಂದು ಯಾವುದೇ ಚರ್ಚೆಯಾಗಿಲ್ಲ. ನಿರ್ಧಾರವೂ ಆಗಿಲ್ಲ.
14. ನಿರ್ಭಯಾ ಯೋಜನೆ ಜಾರಿಗೊಳಿಸಲು ಒಪ್ಪಿಗೆ ಕೇಂದ್ರ ಸರ್ಕಾರದ 56 ಕೋಟಿ ರೂ ಅನುದಾನದಲ್ಲಿ 46 ಕೋಟಿ ರೂ.ಬಳಕೆ. 3000 ಮಹಿಳಾ ಸಿಬ್ಬಂದಿಗೆ ತರಬೇತಿ ನೀಡಲು,ಮೊಬೈಲ್ ಆಪ್ ಡೆವಲಪ್ ಮಾಡಲು ನಿರ್ಧಾರ.


Spread the love

About Laxminews 24x7

Check Also

ಧಾರವಾಡ ಕೃಷಿ ವಿವಿಯಲ್ಲಿ 2018ರಿಂದ ಇಲ್ಲಿಯವರೆಗೆ ಲೆಕ್ಕಪರಿಶೋಧನೆ ನಡೆಸಲು ಸಿಎಜಿಗೆ ಹೈಕೋರ್ಟ್ ಸೂಚನೆ

Spread the loveಬೆಂಗಳೂರು: ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅನರ್ಹ ವ್ಯಕ್ತಿಯೊಬ್ಬರು ಕಳೆದ 2018ರಿಂದ ಕಂಟ್ರೋಲರ್‌ ಹುದ್ದೆ ನಿರ್ವಹಿಸಿರುವ ಅಂಶವನ್ನು ಗಂಭೀರವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ