ಬೆಂಗಳೂರು,: ಬಿಟ್ ಕಾಯಿನ್ ಪ್ರಕರಣದಲ್ಲಿ(bitcoin case) ಮಹತ್ತರ ಬೆಳವಣಿಗೆ ನಡೆದಿದೆ.
ಎಸ್ ಐಟಿ ಯಿಂದ ಇಂದು ಮಹತ್ತರ ಕಾರ್ಯಚರಣೆ ನಡೆಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ಮತ್ತೊಂದು ಹೊಸ ಕೇಸ್ ದಾಖಲಿಸಿದೆ. ಈ ಕೇಸಿನಲ್ಲಿ ವಿಚಾರಣೆಗೆ ಕರೆದಿದ್ದವರನ್ನು ಇದೀಗ ಎಸ್ಐಟಿ ತನ್ನ ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದೆ.
ಇದುವರೆಗೆ ನಡೆದಿದ್ದ ತನಿಖೆ ಆಧಾರದ ಮೇಲೆ ಈಗ ಸಿಐಡಿಯಲ್ಲಿಯೇ ಎಸ್ಐಟಿ ಮತ್ತೊಂದು ಹೊಸ ಎಫ್ಐಆರ್ ದಾಖಲಿಸಿದ್ದು, ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಗಳ ವರ್ಗಾವಣೆ ಬಗ್ಗೆ ಮಾಹಿತಿ ಸಿಕ್ಕಿದೆ. ಜೊತೆಗೆ ಕಸ್ಟಡೊಯಲ್ಲಿ ತಾಂತ್ರಿಕ ವಸ್ತುಗಳು ಇದ್ದಾಗ ಅದನ್ನು ಟ್ಯಾಂಪರ್ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
Laxmi News 24×7