ಬೆಂಗಳೂರು,: ಚೆಸ್ಕಾಂ ಎಂಡಿ(chescom md) ಸಿ.ಎನ್.ಶ್ರೀಧರ್ ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿಎಂ ಕಾರ್ಯಕ್ರಮದಲ್ಲಿ ಕರ್ತವ್ಯ ಲೋಪ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಮೈಸೂರು(Mysore) ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳುಸೋಗೆಗ್ರಾಮದಲ್ಲಿ ಕಾವೇರಿ ನದಿಯಿಂದ 150 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮವನ್ನು ಸಿಎಂ ಹಮ್ಮಿಕೊಂಡಿದ್ದರು. ಈ ವೇಳೆ ಬಟನ್ ಒತ್ತುವ ಮೂಲಕ ಸಿಎಂ ಯೋಜನೆಗೆ ಚಾಲನೆ ನೀಡಬೇಕಿತ್ತು. ಆದರೆ, ಸಿಎಂ ಸಿದ್ದರಾಮಯ್ಯ ಒತ್ತಿದ ವೇಳೆ ಬಟನ್ ಚಾಲನೆಯಾಗಿಲ್ಲವಾಗಿತ್ತು.
ಮುಜುಗರಕ್ಕೆ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ
ಹೌದು ಸಿಎಂ ಬಟನ್ ಒತ್ತಿದ ವೇಳೆ ಅದು ಆನ್ ಆಗಿರಲಿಲ್ಲ. ಇದು ಸಿಎಂ ಸಿದ್ದರಾಮಯ್ಯ ಅವರನ್ನು ತೀವ್ರ ಮುಜುಗರಕ್ಕೆ ಒಳಗುಳ್ಳುವಂತೆ ಮಾಡಿತ್ತು. ಸಿಎಂ ಕಾರ್ಯಕ್ರಮವಾಗಿದ್ದರೂ ವಿದ್ಯುತ್ ಬಗ್ಗೆ ಮುನ್ನೆಚ್ಚರಿಕಾ ಕ್ರಮ ವಹಿಸದ ಚೆಸ್ಕಾಂ ಎಂಡಿ ಶ್ರೀಧರ್, ಅಂದಿನ ಕಾರ್ಯಕ್ರಮಕ್ಕೂ ಗೈರಾಗಿದ್ದರು. ಈ ಹಿನ್ನಲೆ ಕರ್ತವ್ಯಲೋಪ ಎಸಗಿದ ಹಿನ್ನಲೆ ಜೊತೆಗೆ ಸರ್ಕಾರ ಮುಜುಗರಕ್ಕೆ ಒಳಪಡುವ ಸನ್ನಿವೇಶ ಸೃಷ್ಟಿಸಿದ್ದಕ್ಕೆ ಸಸ್ಪೆಂಡ್ ಮಾಡಿ ಆದೇಶಿಸಲಾಗಿದೆ.
Laxmi News 24×7