ಒಂದು ದೇಶ, ಒಂದು ಚುನಾವಣೆ ನಡೆಸಿದರೆ ಕೇಂದ್ರ ಚುನಾವಣಾ ಆಯೋಗ ಪ್ರತೀ 15 ವರ್ಷಕ್ಕೊಮ್ಮೆ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ (ಇವಿಎಂ) ಖರೀದಿಸಲು 10 ಸಾವಿರ ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ!
ಕೇಂದ್ರ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಒಂದು ದೇಶ, ಒಂದು ಚುನಾವಣೆ ನಡೆದರೆ ಇವಿಎಂ ವೆಚ್ಚದ ಕುರಿತು ಮಾಹಿತಿ ನೀಡಿದೆ.
ಇವಿಎಂ ಕಾಲಾವಧಿ 15 ವರ್ಷಗಳದ್ದಾಗಿದೆ. 15 ವರ್ಷಗಳಲ್ಲಿ ಗರಿಷ್ಠ ಮೂರು ಬಾರಿ ಮಾತ್ರ ಬಳಸಬಹುದಾಗಿದೆ. ಒಂದು ದೇಶ, ಒಂದು ಚುನಾವಣೆ ನಡೆದರೆ, ಪ್ರತಿ ಬಾರಿಯೂ ಇವಿಎಂ ಯಂತ್ರಗಳನ್ನು ಹೊಸದಾಗಿಯೇ ಬಳಸಬೇಕಾಗುತ್ತದೆ. ಇದರಿಂದ ಪ್ರತಿ ಬಾರಿ ಚುನಾವಣೆ ನಡೆದಾಗೂ ಆಯೋಗಕ್ಕೆ 10 ಸಾವಿರ ಕೋಟಿ ರೂ. ವೆಚ್ಚವಾಗಲಿದೆ ಎಂದು ತಿಳಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ 11.8 ಲಕ್ಷ ಮತಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈಗ ನಡೆದಂತೆ ಪ್ರತಿ ವರ್ಷ ವಿಧಾನಸಭಾ ಚುನಾವಣೆ ನಡೆಯುವುದರಿಂದ ಇವಿಎಂ ಯಂತ್ರಗಳನ್ನು ಪದೇಪದೆ ಬಳಸಿ ಪೂರ್ಣ ಬಳಕೆ ಮಾಡಬಹುದಾಗಿದೆ.
ಪ್ರತಿ ಇವಿಎಂ ಯಂತ್ರಗಳಿಗೆ ವಿವಿಪಿಎಟಿ, ಬಿಯು ಅಥವಾ ಸಿಯು ಸಾಫ್ಟ್ ವೇರ್ ಅಳವಡಿಬೇಕಾಗುತ್ತದೆ. ಇದರಿಂದ ವಿವಿಪಿಎಟಿ ಹೊಂದಿರುವ ಇವಿಎಂ 36,62,200, ಬಿಯು ಇರುವ ಇವಿಎಂ 46,75,100 ಸಿಯುನ 33,63,300 ಇವಿಎಂ ಯಂತ್ರಗಳು ಅಗತ್ಯವಿದೆ.
2023ನೇ ಸಾಲಿನ ಚುನಾವಣೆಯಲ್ಲಿ ಇವಿಎಂಗಾಗಿ 7900 ಕೋಟಿ ರೂ., ಬಿಯುಗಾಗಿ 9800 ಕೋಟಿ ರೂ., ಹಾಗೂ ಸಿಯುಗಾಗಿ 16,000 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ವಿವರಿಸಿದೆ.