Breaking News

ನಕಲಿ ದಾಖಲೆ ನೀಡಿ ಸಾಲ ಪಡೆಯುವ ಖದೀಮರು: ಲೋನ್​​ ನೀಡಿದ 3 ಬ್ಯಾಂಕ್​ ಮ್ಯಾನೇಜರ್​ಗಳ​ ಬಂಧನ

Spread the love

ನಕಲಿ ದಾಖಲೆ ನೀಡಿ ಸಾಲ ಪಡೆಯುವ ಖದೀಮರು: ಲೋನ್​​ ನೀಡಿದ 3 ಬ್ಯಾಂಕ್​ ಮ್ಯಾನೇಜರ್​ಗಳ​ ಬಂಧನ

ಬೆಂಗಳೂರು, ಜನವರಿ 19: ಸರಿಯಾಗಿ ಪರಿಶೀಲಿಸದೆ ನಕಲಿ ಭೂ ದಾಖಲೆಗಳನ್ನು (Fake Documents) ಹೊಂದಿದ್ದವರಿಗೆಸಾಲ(Loan) ನೀಡಿದ್ದ ಮೂವರು ಬ್ಯಾಂಕ್​ ಮ್ಯಾನೆಜರ್​​ಗಳನ್ನು (Bank Manager) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ​ಐಸಿಐಸಿಐ ಬ್ಯಾಂಕ್ ಸೇಲ್ಸ್ ಮ್ಯಾನೇಜರ್ ರಾಕೇಶ್, ಸೆಂಟ್ ಮಾರ್ಕ್ಸ್ ರಸ್ತೆಯ ಎಸ್​ಬಿಐ ಬ್ಯಾಂಕ್​ನ ಎಜಿಎಂ ಮುರುಳಿಧರ್, ಬೆಂಗಳೂರು ಜಿಲ್ಲಾ ಕೋ ಅಪರೇಟಿವ್ ಬ್ಯಾಂಕ್​​ನ ಮಲ್ಲಿಕಾರ್ಜುನ ಬಂಧಿತ ಆರೋಪಿಗಳು.

ಬ್ಯಾಂಕ್ ಮ್ಯಾನೇಜರ್ ಬಂಧನಕ್ಕೆ ಕಾರಣ ಏನು..?

ಜಮೀನು ಮಾರಲು ಮಾಲಿಕರು ಬ್ರೋಕರ್​ಗಳಿಗೆ ದಾಖಲೆಗಳನ್ನು ನೀಡುತ್ತಾರೆ. ಈ ದಾಖಲೆಗಳ ಮೂಲಕ ನಿಮ್ಮ ಹೆಸರಿನಲ್ಲಿ ಬ್ಯಾಂಕ್​ಗಳಲ್ಲಿ ಅಕೌಂಟ್​ ಸೃಷ್ಟಿಸಿ, ಸಾಲ ಪಡೆಯುತ್ತಾರೆ. ಈ ರೀತಿ ನಕಲಿ ಹಲವು ಸಲ ದಾಖಲೆ ನೀಡಿದ್ದಾರೆ. ಆದರೆ ಸಾಲ ನೀಡುವಾಗ ದಾಖಲೆಗಳನ್ನ ಸರಿಯಾದ ಪರಿಶೀಲನೆ ಮಾಡಿಲ್ಲ. ಲೋನ್ ಅಪ್ರೂವ್ ಆದ ಸ್ವತ್ತಿನಲ್ಲಿ ಲೋನ್ ಅಪ್ರೂವ್ ಆಗಿರುವ ಇಸಿ ಪಡೆದುಕೊಳ್ಳಬೇಕು ಆದರೆ ಇಲ್ಲಿ ಪಡೆದುಕೊಂಡಿಲ್ಲ. ಸುಮಾರು ನಾಲ್ಕೂವರೆ ಕೋಟಿ‌ ರೂ. ಸಾಲ ಇದೇ ರೀತಿ ಅಪ್ರೂವ್ ಮಾಡಿದ್ದರು.


Spread the love

About Laxminews 24x7

Check Also

ಬಜೆಟ್‌ ಪೂರ್ವಭಾವಿ ಸಭೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ

Spread the loveಬೆಂಗಳೂರು, ಫೆ.5- ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಇಂದಿನಿಂದ ಬಜೆಟ್‌ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ.ಮಾರ್ಚ್‌ 6ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ